Belagavi

ವಿಜಯಪುರದಲ್ಲಿ ಕೊರೋನಾ ಲಸಿಕೆಯ ಡ್ರೈ ರನ್‌ ಗೆ ಡಿಸಿ ಪಿ.ಸುನೀಲ ಕುಮಾರ ಚಾಲನೆ

Share

ಕೊರೋನಾ ಲಸಿಕೆಯ ಅಧಿಕೃತ ನೀಡಿಕೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ದೇಶದ 700 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶುಕ್ರವಾರ ಮತ್ತೊಂದು ಸುತ್ತಿನ ಬೃಹತ್‌ ಕೊರೋನಾ ಲಸಿಕೆಯ ಡ್ರೈ ರನ್‌ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಡಿಸಿ ಪಿ. ಸುನೀಲಕುಮಾರ ಚಾಲನೆ ನೀಡಿದರು.

ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಾಲನೆ ನೀಡಿ ಮತನಾಡಿದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮಾತನಾಡಿ ಡ್ರೈ ವ್ಯಾಕ್ಸಿನೇಷನ್ ಡ್ರೈ ರನ್ ಆರಂಭಿಸಿದ್ದೇವೆ, ಜಿಲ್ಲೆಯಲ್ಲಿ ಆರು ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ, ಕೋವಿಡ್ ಲಸಿಕೆ ಹಾಕುವ ಮೊದಲಿನ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.

ಡ್ರೈ ರನ್ ಪ್ರಯೋಗದಲ್ಲಿ ಲಸಿಕೆ ಹಾಕಲಾಗುವುದಿಲ್ಲ. ಇದರಲ್ಲಿ ಒಂದು ಸ್ಥಳದಲ್ಲಿ ಐದು ಸಿಬ್ಬಂದಿ ನೇಮಿಸಲಾಗಿರುತ್ತದೆ. ನಾಲ್ಕು ಹಂತಗಳಲ್ಲಿ ಡ್ರೈ ರನ್ ನಡೆಸಲಾಗುತ್ತೆ, ಈ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಸೇರಿಸಲಾಗಿದೆ 15318 ಆರೋಗ್ಯ ಕಾರ್ಯಕರ್ತರನ್ನು ತಂತ್ರಾಂಶದಲ್ಲಿ ಅಪಡೇಟ್ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು…

Tags:

error: Content is protected !!