Dharwad

ವಿಚಿತ್ರ ಖಾಯಿಲೆಗೆ ತುತ್ತಾದ ಮಕ್ಕಳು, ಮಕ್ಕಳ ಚಿಕಿತ್ಸೆಗಾಗಿ ಸಹಾಯಕ್ಕೆ ಮೊರೆ ಇಟ್ಟ ಪೋಷಕರು…

Share

ಕಿತ್ತು ತಿನ್ನುವ ಬಡತನದಲ್ಲಿ ವಿಚಿತ್ರ ಕಾಯಿಲೆಯಿಂದ ಮಕ್ಕಳು ಬಳಲುತ್ತಿದ್ದು, ಮಕ್ಕಳ ಚಿಕಿತ್ಸೆಗೆಗಾಗಿ ಕುಟುಂಬ ಪಡಲಾರದ ಕಷ್ಟ ಅನುಭವಿಸಿದ್ದು, ಕುಟುಂಬ ತೀರ ಸಂಕಷ್ಟದಲ್ಲಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದು ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ವಿಚಿತ್ರ ಕಾಯಿಲೆಯಿಂದ ನರಳುತ್ತಿರುವ ಈ ಮುದ್ದಾದ ಮಕ್ಕಳು. ಮಕ್ಕಳು ಕುಳಿತ್ತಲೇ ಅಳುವದು ಹಾಗೂ ವಿಚಿತ್ರವಾಗಿ ವರ್ತಿಸುವದನ್ನು ನೋಡಿದ್ರೆ ಕರಳು ಚೂರು ಅನಿಸದೆ ಇರಲಾರದು. ಹೌದು. ಈ ಮುದ್ದಾದ ಮಕ್ಕಳ ಹೆಸರು ಕಾರ್ತಿಕ, ಕುನಾಲ್ ಹಾಗೂ ಗೋವಿಂದ ಅಂತ. ಹೊಸೂರಿನ ವಿನಾಯಕ ಕಬಾಡೆ ಮತ್ತು ಅಶ್ವಿನಿ ಕಬಾಡೆ ದಂಪತಿಗಳ ಮಕ್ಕಳು. ಕು‌ನಾಲ್ ಹಾಗೂ ಕಾರ್ತಿಕ ಅವಳಿ ಮಕ್ಕಳಾಗಿದ್ದು, ಕಳೆದ 12 ವರ್ಷಗಳಿಂದ ವಿಚಿತ್ರವಾದ ರೋಗದಿಂದ ನರಳುತ್ತಿದ್ರೆ, ಇನ್ನು ಕಳೆದ 8 ವರ್ಷದಿಂದ ಮೂರನೇ ಮಗನಾದ ಗೋವಿಂದ ಕೂಡ ಅಂಗವಿಕಲ ಹಾಗೂ ಮಂದ ಬುದ್ದಿಮಾಂಧ್ಯನಾಗಿದ್ದಾನೆ. ಹೀಗಾಗಿ ಮಕ್ಕಳ ಚಿಕಿತ್ಸೆಗಾಗಿ ಇಡೀ ಕುಟುಂಬ ಪಡಲಾರದ ಕಷ್ಟ ಅನುಭವಿಸುತ್ತಿದೆ. ಕಳೆದ 10 ವರ್ಷಗಳಿಂದ ಮಕ್ಕಳ ಆರೋಗ್ಯಕ್ಕಾಗಿ ವಿನಾಯಕ ಕಬಾಡೆಯವರು ಸುಮಾರು 20 ಲಕ್ಷಕ್ಕೂ ಹೆಚ್ಚಿನ ಹಣವನ್ನು ಆಸ್ಪತ್ರೆ ಮತ್ತು ಔಷಧಿಗಾಗಿ ಖರ್ಚು ಮಾಡಿದ್ದಾರೆ. ಸ್ಥಿತಿವಂತರಾಗಿದ್ದ ಕುಟುಂಬ ಮಕ್ಕಳ ಚಿಕಿತ್ಸೆಗಾಗಿ ಎಲ್ಲವನ್ನು ಕಳೆದುಕೊಂಡು ಈಗ ಬೀದಿಗೆ ಬಂದಿದೆ. ಈಗ ಮಕ್ಕಳ ಔಷಧಿ ಸೇರಿದಂತೆ ಇತರೆ ಖರ್ಚು ನಿರ್ವಹಣೆ ಮಾಡಲಾಗದೆ ಕಂಗಾಲಾಗಿ ಕುಳಿತಿದೆ.

ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಈ ಮಕ್ಕಳಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಯಾವ ಆಸ್ಪತ್ರೆಯಲ್ಲಿಯೂ ಮಕ್ಕಳು ಉಳಿಯುವ ಧೈರ್ಯವನ್ನು ವೈದ್ಯರು ನೀಡುತ್ತಿಲ್ಲ.‌ ಹೊಸೂರಿನಲ್ಲಿ ಪಾನಶಾಪ್ ಇಟ್ಟುಕೊಂಡಿರುವ ವಿನಾಯಕ ಅವರು ಈಗ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಒಮ್ಮೆ ಮೂರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ್ರೆ ಲಕ್ಷಾಂತರ ಹಣ ಖರ್ಚಾಗುತ್ತದೆ.
ಹೀಗಾಗಿ ಇಡೀ‌ ಕುಟುಂಬ ಖರ್ಚು ಭರಿಸಲಾಗದೆ ಸಹಾಯಕ್ಕಾಗಿ ದಾನಿಗಳಿಗೆ ಮೊರೆ ಇಡುತ್ತಿದ್ದಾರೆ.

ಮಕ್ಕಳ ಚಿಕಿತ್ಸೆಗಾಗಿ ಹೀಗಾಗಲೇ ಹಲವು ಸಂಘಟನೆಗಳು ಸಾಕಷ್ಟು ಸಹಾಯ ಮಾಡಿವೆ. ಆದ್ರೆ ಜನಪ್ರತಿನಿಧಿಗಳಿಗೆ ಸಹಾಯ‌ ಮಾಡುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಆದ್ರೆ ಇಲ್ಲಿಯವರೆಗೂ ಸರ್ಕಾರದಿಂದ ಹಾಗೂ ಜನಪ್ರತಿನಿಧಿಗಳಿಙದ ಯಾವುದೇ ಸಹಾಯ ಸಹಕಾರ ಸಿಕ್ಕಿಲ್ಲ. ಮಕ್ಕಳ ಚಿಕಿತ್ಸೆಗೆ ಇನ್ನೂ ಲಕ್ಷಾಂತರ ರೂಪಾಯಿ ಹಣದ ಅವಶ್ಯಕತೆ ಇದ್ದು, ಮಕ್ಕಳ ಚಿಕಿತ್ಸೆಗಾಗಿ ಹೃದಯವಂತರು ಸಹಾಯ ಮಾಡುವಂತೆ ಮಕ್ಕಳ ಪೋಷಕರು ಸಾರ್ವಜನಿಕರಲ್ಲಿ‌ ಮನವಿ ಮಾಡಿದ್ದಾರೆ.

ಸಹಾಯ ಮಾಡುವ ದಾನಿಗಳು
ಈ ಬ್ಯಾಂಕ್ ಖಾತೆಗೆ ಹಣ ಹಾಕಬಹುದು..
A/c name- Ashwini vinayak kabadi

Bank name- bank of Barod

A/no – 07790100029682

Ifsc code- BARB0HUBLIX( Fifth character is zero)

Mobile num
9980824336
8453063337

Tags:

error: Content is protected !!