ಸಾರ್ವಜನಿಕ ಜೀವನದಲ್ಲಿ ಅವರ ಕುಂಡಲಿ ನೋಡಿಕೊಂಡು ಸತ್ಕಾರ ಮಾಡಿಕೊಳ್ಳಲು ಆಗಲ್ಲ. ಯುವರಾಜ್ ಸ್ವಾಮಿಯ ಅನೇಕ ವಿಚಾರಗಳನ್ನ ಪೆÇಲೀಸರ ತನಿಖೆಯಿಂದ ತಿಳಿದುಕೊಂಡಿದ್ದೇವೆ.
ಬಿಜೆಪಿ, ಸಂಘ ಪರಿವಾರಕ್ಕೂ ಯುವರಾಜ್‍ಗೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.: ಡಿಸಿಎಂ ಲಕ್ಷ್ಮಣ ಸವದಿಗೆ ವಂಚಕ ಯುವರಾಜ್ ಸ್ವಾಮಿ ಸನ್ಮಾನ ವಿಚಾರ ಸಂಬಂಧ ಅಥಣಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಣ ಸವದಿ ಯುವರಾಜ್‍ನ ಹಿನ್ನೆಲೆ ಮೊದಲು ನನಗೆ ಯಾವುದು ಗೊತ್ತಿರಲಿಲ್ಲ. ಸಾರ್ವಜನಿಕ ಜೀವನದಲ್ಲಿ ಅನೇಕರು ನಮ್ಮ ಮನೆಗಳಿಗೆ ಬರ್ತಾರೆ.
ನಾನು ಬಿಜೆಪಿ ಕಾರ್ಯಕರ್ತ, ಸಂಘ ಪರಿವಾರದ ಮುಖಂಡ ಅಂತಾ ಪರಿಚಯ ಮಾಡಿಕೊಳ್ತಾನೆ. ಹೀಗೆ ಹೇಳಿಕೊಂಡು ಬಂದು ಸತ್ಕಾರ ಮಾಡಿದಾಗ ತಿರಸ್ಕರಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಬಿಜೆಪಿ, ಆರ್‍ಎಸ್‍ಎಸ್‍ಗೂ ಯುವರಾಜ್‍ನಿಗೂ ಯಾವುದೇ ಸಂಬಂಧ ಇಲ್ಲ ಎಂದು ಇದೇ ವೇಳೆ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದರು.
ಒಟ್ಟಾರೆ ಹಲವು ಬಿಜೆಪಿ ನಾಯಕರ ಜೊತೆಗೆ ವಂಚಕ ಯುವರಾಜ್ ಫೋಟೋ ತೆಗೆಸಿಕೊಂಡಿದ್ದ ವಿಚಾರ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಮಾತ್ರ ಸುಳ್ಳಲ್ಲ.