hubbali

ಲೋನ್ ಹಾಗೂ ಕೆಲಸ ಕೋಡಿಸುವುದಾಗಿ ಮಹಿಳೆಯರಿಬ್ಬರಿಂದ ಲಕ್ಷಾಂತರ ರೂ ವಂಚನೆ ಆರೋಪ!

Share

ಲೋನ್ ಹಾಗೂ ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯರಿಬ್ಬರು ಐವತ್ತು ಕ್ಕೂ ಹೆಚ್ಚು ಮಹಿಳೆರಿಗೆ ಮೋಸ ಮಾಡಿರುವ ಆರೋಪ ಕೇಳಿ ಬಂದಿರುವ ಘಟನೆ ಹೊಸೂರ ಬಡವಾಣೆಯಲ್ಲಿ ನಡೆದಿದೆ.

ನಗರದ ನಿವಾಸಿ ಪುಷ್ಪ ಹಾಗೂ ಮಾಬುಬು( ಲಕ್ಷ್ಮೀ )ಎಂಬ ಮಹಿಳೆಯರಿಬ್ಬರು ಸೇರಿಕೊಂಡು ನಗರ ಹಲವಾರು ಪ್ರದೇಶದ ಮಹಿಳೆಯರನ್ನೇ ಗುರಿ ಮಾಡಿಕೊಂಡು ಲೋನ್ ಹಾಗೂ ಕೆಲಸ ಕೋಡಿಸುವುದಾಗಿ ಪ್ರತಿಯೊಬ್ಬರು ಕಡೆ 20 ರಿಂದ 50 ಸಾವಿರ ಹಣ ಪಡೆದು ಮೋಸ ಮಾಡಿದ್ದಾರೆ,ಇದರಿಂದಾಗಿ ರೊಚ್ಚಿಗೆದ್ದ ಸ್ಥಳೀಯರು ಹಾಗೂ ಮೋಸ ಹೋದವರು ಮಹಿಳೆಯರನ್ನು ಮನೆಯಲ್ಲಿ ಕೂಡಾಕಿ ಹಣ ನೀಡುವಂತೆ ದುಂಬಾಲು ಬಿದ್ದಿದ್ದಾರೆ.

ಇದರಿಂದ ಕೆಲವೊತ್ತು ಗೊಂದಲ ವಾತಾವರಣ ಮೂಡಿದ ಪರಿಣಾಮ ಮಹಿಳೆಯರಿಗೆ ಗೂಸ ನೀಡಿದ್ದು ಹಣ ನೀಡುವುದಾಗಿ ಮಹಿಳೆಯರು ಒಪ್ಪಿಕೊಂಡಿದ್ದಾರೆ. ಈ ಘಟನೆಯು
ಗೋಕುಲ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ ..

Tags:

error: Content is protected !!