State

ಲಿಂಗಾಯತ ಪಂಚಮಸಾಲಿಗರ ಪಾದಯಾತ್ರೆ ರದ್ಧಾಗಿಲ್ಲ..ಮುರುಗೇಶ್ ನಿರಾಣಿ ವಿರುದ್ಧ ಬಸವಜಯ ಮೃತ್ಯುಂಜಯ ಶ್ರೀ ಗರಂ..!

Share

ಬಿಜೆಪಿ ಶಾಸಕ ಮುರುಗೇಶ್ ನಿರಾಣಿಗೆ ಮಂತ್ರಿ ಸ್ಥಾನ ಖಚಿತವಾಗುತ್ತಿದ್ದಂತೆ ಪಂಚಮಸಾಲಿ 2 ಮೀಸಲಾತಿಗೆ ನಾಳೆ ನಡೆಯಬೇಕಿದ್ದ ಪಾದಯಾತ್ರೆ ರದ್ಧಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಆದ್ರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನಾಳೆ ನಡೆಯಲಿರುವ ಪಾದಯಾತ್ರೆ ರದ್ಧಾಗಿಲ್ಲ. ಸಂಜೆಯೊಳಗೆ ಮೀಸಲಾತಿ ಘೋಷಿಸದೇ ಹೋದ್ರೆ, ಪಾದಯಾತ್ರೆ ಮೂಲಕ 2 ಲಕ್ಷ ಜನರನ್ನು ಸೇರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಖಚಿತವಾಗುತ್ತಿದ್ದಂತೆ, ಪಂಚಮಸಾಲಿ ಪೀಠದಿಂದ ನಡೆಯುವ ಪಾದಯಾತ್ರೆ ರದ್ಧಾಗಿದೆ ಎನ್ನಲಾಯ್ತು. ಅದ್ರಂತೆ, ಮುರುಗೇಶ್ ನಿರಾಣಿಯವ್ರು ಕೂಡ ಶ್ರೀಗಳು ತಮ್ಮ ಪಾದಯಾತ್ರೆ ನಿರ್ಣಯವನ್ನ ಹಿಂಪಡೆದಿದ್ದಾರೆ ಎಂದು ಹೇಳಿದ್ರು. ಆದ್ರೆ ಮುರುಗೇಶ್ ನಿರಾಣಿ ಅವರ ಹೇಳಿಕೆಗೆ ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುರುಗೇಶ್ ನಿರಾಣಿ ವಿನಾಕಾರಣ ಹೇಳಿಕೆ ನೀಡಬಾರದು. ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ. ಮುಂದೆ ಇಟ್ಟ ಹೆಜ್ಜೆಯನ್ನ ಹಿಂದಿಡುವ ಮಾತೇ ಇಲ್ಲ. ನಾನು ಮುರುಗೇಶ್ ನಿರಾಣಿಯವ್ರಿಗೆ ನೇರವಾಗಿ ಹೇಳುತ್ತಿದ್ದೇನೆ. ಸಂಜೆಯೊಳಗೆ ಮೀಸಾಲಾತಿ ಘೋಷಿಸಿ, ಆಗ ಮಾತ್ರ ನಾವು ಪಾದಯಾತ್ರೆಯನ್ನ ಹಿಂಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

 

Tags:

error: Content is protected !!