ಚಿಕ್ಕೋಡಿಯ ಕೆಎಲ್‍ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜರ 160ನೇಯ ಜಯಂತಿಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಕ್ಕೋಡಿಯ ಕೆಎಲ್‍ಇ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ.ಪ್ರಸಾದ ರಾಂಪುರೆ ಶಿರಸಂಗಿ ಲಿಂಗರಾಜರಲ್ಲಿ ಸಮಾಜಕ್ಕೆ ಕೊಡುವ ಭಾವ ಅವರಲ್ಲಿತ್ತು. ಯಾವುದೇ ವ್ಯಕ್ತಿ ಮಹತ್ವವಲ್ಲ, ಆದರೆ ಅವನ ವ್ಯಕ್ತಿತ್ವ ಮುಖ್ಯವಾದದ್ದು. ಇಂದು ಅಂಥಹ ವ್ಯಕ್ತಿತ್ವವನ್ನು ನೆನೆಯುವ ದಿನ. ಅವರು ತ್ಯಾಗ ಹಾಗೂ ದಾನಕ್ಕೆ ಕೆಎಲ್‍ಇ ಸಂಸ್ಥೆ ಸದಾ ಚಿರಋಣಿ ಆಗಿರುತ್ತದೆ. ಈ ನಿಟ್ಟಿನಲ್ಲಿ ಕೆಎಲ್‍ಇ ಸಂಸ್ಥೆಯ ಪ್ರಥಮ ಅಂಗಸಂಸ್ಥೆಗೆ ಲಿಂಗರಾಜ ಕಾಲೇಜು ಎಂದು ನಾಮಕರಣ ಮಾಡಲಾಗಿದೆ. ತ್ಯಾಗ ಮನೋಭಾವವಿದ್ದರೇ ಇತಿಹಾಸ ನಿರ್ಮಾಣವಾಗುತ್ತದೆ ತನು, ಮನ, ಧನದಿಂದ ಸಮಾಜಮುಖಿ ಸೇವೆ ಸಲ್ಲಿಸಿರುವ ಲಿಂಗರಾಜರು ಚಿರಸ್ಮರಣ ಯರು. ಇಂದು ಜನರು ಯಶಸ್ಸಿನ ಬೆನ್ನಟ್ಟಿ ಮಾನವಿಯ ಮೌಲ್ಯಗಳನ್ನು ಮರೆತಿದ್ದಾರೆ. ಮಹಾನ ವ್ಯಕ್ತಿತ್ವಗಳನ್ನು ನೋಡಿ ಅವರಲ್ಲಿರುವ ಮೌಲ್ಯಗಳನ್ನು ನಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಅಂದಿನ ಕಾಲದಲ್ಲಿ ಉತ್ತರ ಕರ್ನಾಟಕ ಬಡವರ್ಗ ಶಿಕ್ಷಣದಿಂದ ವಂಚಿತವಾಗಿತ್ತು. ಬಡ ವಿದ್ಯಾರ್ಥಿಗಳಿಗೆ ಮುಂಬಯಿ ಹಾಗೂ ಪೂಣೆಯಲ್ಲಿ ಶಿಕ್ಷಣ ಪಡೆದುಕೊಳ್ಳಲೂ ಲಿಂಗರಾಜರು ಧನಸಹಾಯ ಮಾಡುತ್ತಿದ್ದರು. ತಮ್ಮ ವೈಯಕ್ತಿಕ ಜೀವನದಲ್ಲಿ ಜರ್ಜರಿತರಾದರೂ ಸಹಿತ ಸಮಾಜದ ಒಳಿತಿಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಕೃಷಿಯಲ್ಲಿಯು ಸಹಿತ ಹೊಸ ಪದ್ದತಿಗಳನ್ನೂ ಅಳವಡಿಸಿಕೊಂಡು ಬೇರೆಯವರಿಗೆ ಮಾದರಿಯಾಗಿದ್ದರು. ಅವರು ಬಾಲ್ಯವಿವಾಹವನ್ನು ವಿರೋಧಿಸಿದ್ದರು ಹಾಗೆಯೇ ವಿಧವಾ ವಿವಾಹ ಪೆÇ್ರೀತ್ಸಾಹಿಸಿ ಸಮಾಜ ಮುಖಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಪ್ರೊ.ಸಚೀನ ಮೆಕ್ಕಳಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಬಸವರಾಜ ಚೌಕಿಮಠ, ಪ್ರೊ. ಪ್ರದೀಪ ಹೊದ್ಲೂರ, ಪ್ರೊ. ಜಗನ್ನಾಥ ಜಾಧವ, ಪ್ರೊ. ಮುರಳಿ ಅಂಬೇಕರ, ಪ್ರೊ. ವೀರಣ್ಣಾ ಮೋದಿ, ಪ್ರೊ. ಶಿಲ್ಪಾ ಹೊಸಗೌಡರ, ಪ್ರೊ. ಪ್ರವೀಣ ಗುರವ, ಪ್ರೊ. ಅಭೀನಂದನ ಕಬ್ಬೂರ, ಪ್ರೊ. ಸಂಜಯ ಅಂಕಲಿ ಬೋಧಕ- ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.