Dharwad

ರೌಡಿಸಂ ಫೀಲ್ಡ್​ನಲ್ಲಿ ಹೆಸರು ಮಾಡಲು ಅಮಾಯಕನನ್ನು ಕೊಂದ ಕಿರಾತಕ

Share

ರೌಡಿಸಂ ಫೀಲ್ಡ್​ನಲ್ಲಿ ಹೆಸರು ಮಾಡುವ ಉದ್ದೇಶದಿಂದ ಪುಡಿ ರೌಡಿವೋರ್ವ ಕುಲ್ಲಕ ಕಾರಣಕ್ಕೆ ತನ್ನದೇ ಏರಿಯಾದ ಅಮಾಯಕ ವ್ಯಕ್ತಿಯನ್ನು ಕೊಲೆ‌ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದೆ.


ಹುಬ್ಬಳ್ಳಿಯ ಗಿರಣಿಚಾಳದ ನಿವಾಸಿ ರವಿ ಮುದ್ದಿನಕೇರಿ ಎಂಬಾತ ಕೊಲೆಯಾದ ವ್ಯಕ್ತಿ. ನಿನ್ನೆ ರವಿಯೊಂದಿಗೆ ಗಿರಿಣಿಚಾಳದ ಪುಡಿ ರೌಡಿ ವಿಜಯ್​ ಆಲೂರ ಜಗಳ ತಗೆದು ಹಿಗ್ಗಾಮುಗ್ಗಾ ಥಳಿಸಿ ಎದೆಗೆ ಒದ್ದು ಕೊಲೆ ಮಾಡಲು ಯತ್ನಿಸಿದ್ದ ಎನ್ನಲಾಗ್ತಿದೆ. ಆದ್ರೆ ಗಂಭೀರವಾಗಿ ಗಾಯಗೊಂಡ ರವಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ರವಿ ಸಾವನ್ನಪ್ಪಿದ್ದಾನೆ.


ಘಟನೆ ನಂತರ ಆರೋಪಿ ಪರಾರಿಯಾಗಿದ್ದು, ಕಿಮ್ಸ್ ಆಸ್ಪತ್ರೆಗೆ ಡಿಸಿಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!