Chikkodi

ರೈತ ಆತ್ಮಹತ್ಯೆ ಕುಟುಂಬ ಸದಸ್ಯರಿಗೆ ಪರಿಹಾರ ಚೆಕ್ ವಿತರಿಸಿದ ಶಾಸಕ ಗಣೇಶ ಹುಕ್ಕೇರಿ

Share

ಇತ್ತೀಚಿಗೆ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬ ಸದಸ್ಯರಿಗೆ ಶಾಸಕ ಗಣೇಶ ಹುಕ್ಕೇರಿಯವರು ಪರಿಹಾರದ ಚಕ್ ಗಳನ್ನು ಹಸ್ತಾಂತರಿಸಿದರು‌.

ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಸಾಲಬಾಧೆ ತಾಳಲಾರದೆ ಆತ್ಮಹತ್ಯೆಯನ್ನು ಮಾಡಿಕೊಂಡ ರೈತರಾದ ರಾವಸಾಬ ಸರಡೆ,ಸದಾಶಿವ ಚಿಂಚಲೆ,ತಾತ್ಯಾಸಾಹೇಬ ಐನಾಪೂರೆ ಕುಟುಂಬದ ಸದಸ್ಯರಿಗೆ ತಲಾ ೫ ಲಕ್ಷರೂಪಾಯಿ ಚೆಕಗಳನ್ನು ಶಾಸಕ ಗಣೇಶ ಹುಕ್ಕೇರಿ ವಿತರಿಸಿದರು. ನಂತರ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆಯನ್ನು ಮಾಡಿಕೊಳ್ಳಬಾರದು. ನನ್ನ ಕ್ಷೇತ್ರದಲ್ಲಿ ರೈತರ ಜೊತೆ ನಮ್ಮ ಹುಕ್ಕೇರಿ ಕುಟುಂಬ ಸದಾ ನಿಮ್ಮ ಬೆಂಬಲಕ್ಕೆ ನಿಂತಿರುತ್ತದೆ.ಈ ನಿಟ್ಟಿನಲ್ಲಿ ಸರ್ಕಾರದಿಂದ ಬಂದಂತಹ ಪರಿಹಾರಧನವನ್ನು ಸಮರ್ಪಕವಾಗಿ ಬಳಸಿಕೊಂಡು ರೈತರು ಹೊಸಜೀವನವನ್ನು ರೂಪಿಸಿಕೊಳ್ಳಬೇಕೆಂದು ಶಾಸಕ ಗಣೇಶ ಹುಕ್ಕೆರಿಯವರು ತಿಳಿಸಿದರು.

ಈ ಸಂಧರ್ಭದಲ್ಲಿ ಸಂಜಯ ಕುಡಚೆ,ಶಂಕರ ಅಂಬಿ,ರಾಜು ಇಂಗಳೆ,ರಮೇಶ‌ ಮುರಚಟೆ,ಬಸಪ್ಪಾ ಮಿರಜೆ,ಅಣ್ಣಾಸಾಹೇಬ ಡಿಗರಜೆ ,ಭಿಮು ಸಂಗಮೆ,ಅಣ್ಣಾಸಾಹೆಬ ಸರಡೆ,ಶಂಕರ ಶ್ರಂಗಾರೆ,ರಾವಸಾಬ ಚಿಂಚಲೆ,ವಿಲಾಸ ಪವಾರ,ಪ್ರಕಾಶ ಚಿಗರೆ,ಕ್ರಿಷ್ಣಾ ಮೋರೆ,ಅಜಯ ಮಾನೆ,ಸಚಿನ ಶಿಂಧೆ,ಸಂಜಯ ಮಾನೆ,ಸಾಗರ ಅರಬಾಳೆ,ಮಹಾದೇವ ಲೋಕುರೆ,ರಾಜು ಪವಾರ,ಅಶೋಕ ಬಾಮನೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು….

Tags:

error: Content is protected !!