Raibag

ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾಲ: ಬೆಚ್ಚಿ ಬಿದ್ದ ರೈತ ಸಮುದಾಯ

Share

ರೈತರಿಗೆ ತಿಳಿಯದಂತೆ ರೈತರ ಹೆಸರಿನಿಂದ ಸಾಲ ಪಡೆದು ವಂಚನೆ ಮಾಡಿರುವ ಘಟನೆ ಐಸಿಐಸಿಐ ಬ್ಯಾಂಕಿನ ಕಾರ್ಪೊರೇಟ್ ವಲಯದಲ್ಲಿ ನಡೆದಿದೆ. ಈ ಘಟನೆಯಿಂದ ರೈತ ಸಮುದಾಯ ಬೆಚ್ಚಿಬಿದ್ದಿದೆ. ಈ ಕುರಿತು ರಾಯಬಾಗ ತಾಲೂಕು ಚಿಂಚಲಿ ಶಾಖೆಯಲ್ಲಿ ಹೋಗಿ ವಿಚಾರಿಸಿದರೆ ಇದು ಹುಬ್ಬಳ್ಳಿ ಕಾರ್ಪೊರೇಟ್ ಶಾಖೆಯಲ್ಲಿ ನಡೆದಿರುವ ಘಟನೆ ಎಂದು ವಿವರಣೆ ನೀಡಲಾಗಿದೆ.

ರೇಣುಕಾ ಸಕ್ಕರೆ ಕಾರ್ಖಾನೆಯವರು ಐಸಿಐಸಿಐ ಬ್ಯಾಂಕಿನ ಅಧಿಕಾರಿಗಳ ಜೊತೆ ಸೇರಿಕೊಂಡು ಕಬ್ಬು ಕಳುಹಿಸಿದ ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ವಿಷಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಚಿಂಚಲಿ ಶಾಖೆಯಲ್ಲಿ ಹೋಗಿ ವಿಚಾರಿಸಿದರೆ ಇದು ಹುಬ್ಬಳ್ಳಿ ಕಾರ್ಪೊರೇಟ್ ಶಾಖೆಯಲ್ಲಿ ನಡೆದಿರುವ ಘಟನೆ ಎಂದು ವಿವರಣೆ ನೀಡಲಾಗಿದೆ.

ರಾಯಬಾಗ ಪಟ್ಟಣದ ನ್ಯಾಯವಾದಿ ಎಸ್ ಬಿ ಪಾಟೀಲ್ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬ್ಯಾಂಕಿನ ಸಿಬ್ಬಂದಿಯವರು ಬಿಲ್ ತಪಾಸಣೆ ಮಾಡಿದರು. ಅದರಲ್ಲಿ ಐಸಿಐಸಿಐ ಬ್ಯಾಂಕ್ ಚಿಂಚಲಿ ಶಾಖೆಯಲ್ಲಿ ಈಗಾಗಲೇ ಸಾಲ ಇರುವುದಾಗಿ ಗೊತ್ತಾಗಿದೆ. ಬೆಚ್ಚಿಬಿದ್ದ ನ್ಯಾಯವಾದಿ ಇಲ್ಲಿಯವರೆಗೆ ಯಾವ ಶಾಖೆಯಲ್ಲಿಯೂ ಸಾಲ ಪಡೆದಿರುವುದಿಲ್ಲ. ಇದು ಯಾವ ರೀತಿ ಆಗಿದೆ ಎಂದು ತಿಳಿದುಕೊಳ್ಳಲು ಚಿಂಚಲಿ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮೊದಲು ದಾಖಲೆಗಳನ್ನು ನೀಡಲು ನಿರಾಕರಿಸಿದ ಬ್ಯಾಂಕ್ ಸಿಬ್ಬಂದಿಗಳು ನಂತರ ದಾಖಲೆಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ಕೃಷಿ ಸಾಲ ಪಡೆದಿರುವ ಬಗ್ಗೆ ದಾಖಲೆ ಆಗಿದೆ. ಅಸಲಿಗೆ ನ್ಯಾಯವಾದಿಗಳ ಹೆಸರಿನಿಂದ ಜಮೀನು ಇರುವುದಿಲ್ಲ. ಅದು ಹೇಗೆ ಕೃಷಿ ಸಾಲ ಮಂಜೂರು ಮಾಡಿದರು ಎಂಬುದು ವಂಚನೆಗೆ ಹಿಡಿದ ಕೈಗನ್ನಡಿಯಾಗಿದೆ. ಇದಲ್ಲದೆ, ಸಹಿ ಸೇರಿದಂತೆ ಕಾಗದ ಪತ್ರಗಳು ನಕಲಿಯಾಗಿರುವುದು ಪತ್ತೆಯಾಗಿದೆ.
ವಂಚನೆ ಮಾಡಿದ ಕಾರ್ಖಾನೆ ಮತ್ತು ಬ್ಯಾಂಕಿನ ಸಿಬ್ಬಂದಿ ವಿರುದ್ಧ ಕುಡಚಿ ಪೆÇಲೀಸ್ ಠಾಣೆಯಲ್ಲಿ ನ್ಯಾಯವಾದಿ ಪ್ರಕರಣ ದಾಖಲಿಸಿದ್ದಾರೆ.

ಈ ಕುರಿತು ರಾಯಬಾಗ ಪಟ್ಟಣದ ನ್ಯಾಯವಾದಿ ಎಸ್ ಬಿ ಪಾಟೀಲ್ ಮಾಹಿತಿ ನೀಡಿ ಮಾತನಾಡಿ, ಪೆÇಲೀಸ್ ಇಲಾಖೆ ಪಾರದರ್ಶಕ ತನಿಖೆ ಮಾಡುತ್ತದೆ ಎಂಬ ನಂಬಿಕೆ ಇದೆ. ಆರೋಪಿಗಳು ರಾಜಕೀಯವಾಗಿ ಪ್ರಭಾವಶಾಲಿ ಆಗಿದ್ದಾರೆ. ಸಾಕ್ಷ್ಯ ನಾಶಪಡಿಸುವ ಸಂಭವ ಇದೆ. ವಿಶೇಷ ತಂಡ ರಚಿಸಿ ತನಿಖೆ ಮಾಡುವ ಅವಶ್ಯಕತೆ ಇದೆ. ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ.

Tags:

error: Content is protected !!