Dharwad

ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಕೆವಿಜಿ ಬ್ಯಾಂಕ್‍ ಚೇರಮನ್‍ಗೆ ಮನವಿ ಸಲ್ಲಿಸಿದ ರೈತರು

Share

ಅತಿ ಹೆಚ್ಚು ರೈತರಿಗೆ ಸಾಲ ನೀಡಿದ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ರೈತರ ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಕ್ರಮ ಕೈಗೊಂಡು ರೈತರನ್ನು ಉಳಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ನೇಗಿಲಯೋಗಿ ರೈತ ಸೇವಾ ಸಂಘದ ನೂರಾರು ರೈತರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಧಾರವಾಡ ಪ್ರಧಾನ ಕಚೇರಿಗೆ ಭೇಟಿ ನೀಡಿ ಬ್ಯಾಂಕಿನ ಚೇರಮನ್ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳು ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಲ್ಲದೇ, ಅಸಲಿನಲ್ಲೂ ತುಸು ಕಡಿತ ಮಾಡಿ ಸಾಲ ಮರುಪಾವತಿಗೆ ಕ್ರಮ ಕೈಗೊಂಡಿದ್ದಾರೆ. ಅತಿ ಹೆಚ್ಚು ರೈತರಿಗೆ ಸಾಲ ನೀಡಿದ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಸಹ ರೈತರ ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಕ್ರಮ ಕೈಗೊಂಡು ರೈತರನ್ನು ಉಳಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ನೇಗಿಲಯೋಗಿ ರೈತ ಸೇವಾ ಸಂಘದ ನೂರಾರು ರೈತರು ಸೋಮವಾರ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಧಾರವಾಡ ಪ್ರಧಾನ ಕಚೇರಿಗೆ ತೆರಳಿ ಬ್ಯಾಂಕಿನ ಚೇರಮನ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಜಿಲ್ಲಾ ನೇಗಿಲಯೋಗಿ ರೈತ ಸೇವಾ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಚಂದನಮಟ್ಟಿ ಮಾತನಾಡಿ, ರೈತರು ಸಾಲ ತೀರಿಸಲಾಗದ ಪರಿಸ್ಥಿತಿಯಲ್ಲಿದ್ದಾರೆ. ಪ್ರವಾಹ, ಬರಗಾಲದಿಂದ ತತ್ತರಿಸಿ, ಕೋವಿಡ್ ಪರಿಸ್ಥಿತಿಯಿಂದ ಮಾರುಕಟ್ಟೆ ದೊರೆಯದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುತೇಕ ಎಲ್ಲ ಗ್ರಾಮಗಳಲ್ಲಿ ಬ್ಯಾಂಕ್ ಹೊಂದಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಆಡಳಿತದವರು ರೈತರ ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಕ್ರಮ ಕೈಗೊಂಡು ರೈತರನ್ನು ಉಳಿಸಬೇಕು ಎಂದು ಆಗ್ರಹಿಸಿದರು.

ಬೆಳಗಾವಿ ಜಿಲ್ಲಾ ನೇಗಿಲಯೋಗಿ ರೈತ ಸೇವಾ ಸಂಘದ ಅಧ್ಯಕ್ಷ ರವಿ ಪಾಟೀಲ, ನಾಗೇಂದ್ರ ದೊಡ್ಡನಾಯ್ಕರ್, ಮಂಜುನಾಥ ಯರಗಟ್ಟಿ, ಕಿತ್ತೂರು ತಾಲೂಕು ಅಧ್ಯಕ್ಷ ವೀರಭದ್ರ ತುರಮರಿ, ಬಸವಂತ ಹಾರೋಗೊಪ್ಪ, ಪ್ರಸಾದ ಕುಲಕರ್ಣಿ,ಜಗದೀಶ ಪಾಟೀಲ. ಮಂಜುನಾಥ ಕಿಡತಾಳ ಮತ್ತಿತರರು ಇದ್ದರು.

 

Tags:

error: Content is protected !!