ಗಣನೀಯ ಸೇವೆಗಾಗಿ ರಾಷ್ಟ್ರಪತಿ ಪದಕದೊಂದಿಗೆ ಪುರಸ್ಕಾರ ಪಡೆದ ಬೆಳಗಾವಿ ಕೆಎಸ್‍ಆರ್‍ಪಿ ಎರಡನೇ ಪಡೆ ಕಮಾಂಡೆಂಟ್ ಹಂಜಾ ಹುಸೇನ್ ಅವರನ್ನು ಬೆಳಗಾವಿ ವಿಜಯಾ ಅರ್ಥೋ ಹಾಗು ಟ್ರೌಮಾ ಸೆಂಟರ್‍ನ ಡಾ.ರವಿ ಪಾಟೀಲ ಮತ್ತು ಸಂಗಡಿಗರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.
ಬೆಳಗಾವಿ ಕೆಎಸ್‍ಆರ್‍ಪಿ ಎರಡನೇ ಪಡೆ ಕಮಾಂಡೆಂಟ್ ಹಂಜಾ ಹುಸೇನ್‍ಗೆ ಇತ್ತೀಚೆಗೆ ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ರಾಷ್ಟ್ರಪತಿ ಪದಕದೊಂದಿಗೆ ಪುರಸ್ಕಾರ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ವಿಜಯಾ ಅರ್ಥೋ ಹಾಗು ಟ್ರೌಮಾ ಸೆಂಟರ್‍ನ ಡಾ.ರವಿ ಪಾಟೀಲ, ವೀರೇಶ ಹಿರೇಮಠ ಹಾಗೂ ಬಸವರಾಜ ರೊಟ್ಟಿ ಮತ್ತು ಕೆಂಪಣ್ಣ ಕೋಚರಗಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.