Chikkodi

ರಾಯಬಾಗ ತಾಲೂಕಿನ ಶಾಸಕರಿಗೆ ಸಚಿವ ಸ್ಥಾನ ಕೊಡಿ- ರೈತ ವಕ್ತಾರ ತ್ಯಾಗರಾಜ ಕದಮ

Share

ರಾಜ್ಯ ಬಿಜೆಪಿ ಸರಕಾರ ಬೆಳಗಾವಿ ಜಿಲ್ಲೆಗೆ ಅತ್ಯುನ್ನತ ಸ್ಥಾನಮಾನ ನೀಡಿದೆ.ಆದರೆ ಇಂದಿಗೂ ಕಳೆದ ೪೦ವರ್ಷಗಳಿಂದ ರಾಯಬಾಗ ತಾಲೂಕಿನ ವಿಧಾನಸಭಾ ಕ್ಷೇತ್ರಗಳಿಗೆ ಇಂದಿಗೂ ಸಚಿವ ಸ್ಥಾನಮಾನ ನೀಡಿಲ್ಲ ಎಂದು ರೈತ ಸಂಘದ ವಕ್ತಾರ ತ್ಯಾಗರಾಜ ಕದಂ ಹೇಳಿದರು.

ಚಿಕ್ಕೋಡಿ ಪಟ್ಟಣದ ಪ್ರವಾಸಿ‌ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತ್ಯಾಗರಾಜ ಕದಂ ಅವರು ಹಿಂದಿನ ಸರ್ಕಾರಗಳಲ್ಲಿ ಜಿಲ್ಲೆಯಲ್ಲಿ ಅನೇಕ ಪ್ರಗತಿ ಪರ ನೀರಾವರಿ, ಶಿಕ್ಷಣ, ಸೇರಿ ಹಲವು ಯೋಜನೆಗಳು ಜಾರಿಯಾಗಿವೆ. ಆದರೆ ಮೀಸಲು ಮತಕ್ಷೇತ್ರ ಜಾರಿಯಾದ ನಂತರ ರಾಯಬಾಗ ಕ್ಷೇತ್ರದ ರಾಜಕೀಯದಲ್ಲಿ ಪ್ರಾತಿನಿತ್ಯ ಕೊರತೆ ಉಂಟಾಗಿದೆ.ಇದರಿಂದ ರಾಯಬಾಗ ತಾಲೂಕಿನ ಕುಡಚಿ,ರಾಯಬಾಗ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು‌ ಕ್ಷೇತ್ರದ ಶಾಸಕರನ್ನು ಸಚಿವರನ್ನಾಗಿ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯಸರ್ಕಾರದ ವಿರುದ್ಧ ದೋಡ್ಡಮಟ್ಟದ ಹೋರಾಟವನ್ನು ಮಾಡಲಾಗುವುದು ಎಂದು ರೈತ ವಕ್ತಾರ ತ್ಯಾಗರಾಜ ಕದಂ ಅವರು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು..

ಪತ್ರಿಕಾಗೋಷ್ಠಿಯಲ್ಲಿ ಬಾಬುರಾವ ನಡೋಣಿ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

Tags:

error: Content is protected !!