ಬೈಕ್‍ನಿಂದ ಮನೆಗೆ ಫೋಟೋಗ್ರಾಪ್‍ರ್ ಓರ್ವನಿಗೆ ತಡೆದು ಕಬ್ಬಿನ ರಾಡ್‍ನಿಂದ ಹೊಡೆದು ಆತನ ಬಳಿಯಿದ್ದ ಮೊಬೈಲ್, ಚಿನ್ನದ ಉಂಗರು, 15 ಸಾವಿರ ನಗದು ಹಣ ಹೀಗೆ ಸುಮಾರು 50 ಸಾವಿರ ರೂಪಾಯಿಯಷ್ಟು ಬೆಲೆ ಬಾಳುವ ವಸ್ತುಗಳು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಕಾಗವಾಡ ತಾಲೂಕಿನ ಉಗಾರ ಖುರ್ದದಲ್ಲಿ ಸಂಭವಿಸಿದೆ.
ಉಗಾರ ಖುರ್ದ ಪಟ್ಟಣದ ಪ್ರಥಮೇಶ ಫೋಟೊ ಸ್ಟುಡಿಯೋ ಮಾಲೀಕ ವಿಶ್ವನಾಥ ತಾನ್ಹಾಜಿ ದೇಸಾಯಿ ಎಂಬುವವರು ತಮ್ಮ 11 ವರ್ಷದ ಮಗನೊಂದಿಗೆ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಉಗಾರ ರೈಲ್ವೆ ನಿಲ್ದಾಣ ಮಾರ್ಗವಾಗಿ ತೋಟದ ಮನೆಗೆ ಹೋಗುವಾಗ ಮೂವರು ದುಷ್ಕರ್ಮಿಗಳು ಏಕಾಏಕಿ ಬೈಕ್ ಅಡ್ಡಗಟ್ಟಿ ಕಬ್ಬಿನ ರಾಡಿನಿಂದ ಹೊಡೆದು 26 ಸಾವಿರ ರೂ. ಮೌಲ್ಯದ ಮೊಬೈಲ್, 6 ಗ್ರಾಂ ಚಿನ್ನದ ಉಂಗರು, 15 ಸಾವಿರ ರೂ. ನಗದು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಮಾತನಾಡಿರುವ ಹಲ್ಲೆಗೆ ಒಳಗಾಗಿರುವ ವ್ಯಕ್ತಿ ಮತ್ತು ಅವರ ಮಗ ಈ ಎಲ್ಲರು ಹಿಂದಿ ಭಾμÉಯಲ್ಲಿ ಮಾತನಾಡುತ್ತಿದ್ದರು. ಈ ಘಟನೆ ನಡೆಯುವ ಪೂರ್ವದಲ್ಲಿ ಮಧ್ಯ ಸೇವನೆ ಮಾಡಿದ್ದ ಬಗ್ಗೆ ಮಹಾರಾಷ್ಟ್ರದಿಂದ ತಂದಿರುವ ಮದ್ಯದ ಖಾಲಿ ಬಾಟಲಿಗಳನ್ನು ಸ್ಥಳದಲ್ಲಿ ಎಸೆದಿದ್ದಾರೆ. ಈ ಘಟನೆಯಿಂದ ಜನರಲ್ಲಿ ಭೀತಿ ಮೂಡಿಸಿದೆ ಎಂದು ಹೇಳಿದ್ದಾರೆ.
ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಸ್ಥಳಕ್ಕೆ ಕಾಗವಾಡ ಪೆÇಲೀಸ್ ಠಾಣೆಯ ಎಎಸ್‍ಐ ಎಸ್.ಎಸ್.ಮುರಗೋಡ, ಮುಖ್ಯ ಪೇದೆ ಕಾಡಪ್ಪಾ ಚಂದೂರೆ ಭೇಟಿ ನೀಡಿ ಪರಿಶೀಲನೆ ಮಾಡಿ ತನಿಖೆ ಕೈಗೊಂಡಿದ್ದಾರೆ.