Belagavi

ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ..ನಿಯಮ ಸಡಿಲಿಕೆಗೆ ಚಿಂತನೆ..ಡಿಸಿಎಂ ಲಕ್ಷ್ಮಣ ಸವದಿ

Share

ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸಾಕಷ್ಟು ನಿಯಂತ್ರಣಕ್ಕೆ ಬಂದಿರುವುದರಿಂದ ನಿಯಮಾವಳಿಗಳನ್ನು ಸಡಿಲಿಕೆ ಮಾಡುವ ನಿಟ್ಟಿನಲ್ಲಿ ಚಿಂತನೆ ಮಾಡುತ್ತಿದ್ದೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಜನವರಿ 17ರಂದು ಬೆಳಗಾವಿಗೆ ಅಮಿತ್ ಷಾ ಆಗಮಿಸುತ್ತಿರುವ ಹಿನ್ನೆಲೆ ನಗರದ ಜಿಲ್ಲಾಕ್ರೀಡಾಂಗಣಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಭೇಟಿ ನೀಡಿ ಕಾರ್ಯಕ್ರಮದ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು. ಇದೇ ವೇಳೆ 200ಕ್ಕಿಂತ ಹೆಚ್ಚು ಜನರು ಸಭೆ ಸಮಾರಂಭಗಳಲ್ಲಿ ಸೇರಬಾರದು ಎಂಬ ನಿಯಮವಿದೆ ಆದ್ರೆ ಈ ನಿಯಮವನ್ನು ಬಿಜೆಪಿ ಅವರು ಉಲ್ಲಂಘಿಸಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಲಕ್ಷ್ಮಣ ಸವದಿ ಈಗಾಗಲೇ ಬಿಹಾರ ಸೇರಿದಂತೆ ಅನೇಕ ಕಡೆ ಚುನಾವಣೆಗಳಾದ ಸಂದರ್ಭಗಳಲ್ಲಿ ಎಲ್ಲಾ ಪಕ್ಷಗಳು ಸಾಕಷ್ಟು ಜನರನ್ನು ಸೇರಿಸಿದ್ದಾರೆ. ಈಗಾಗಲೇ ಕೋವಿಡ್ ಬಹಳಷ್ಟು ನಿಯಂತ್ರಣದಲ್ಲಿ ಬಂದಿರುವುದರಿಂದ ಯಾವುದೇ ಭಯದ ವಾತಾವರಣವಿಲ್ಲ. ಹೀಗಾಗಿ ಎಲ್ಲರಿಗೂ ಮಾಸ್ಕ್ ಹಾಕಿಕೊಂಡು ಕಾರ್ಯಕ್ರಮಕ್ಕೆ ಬರುವ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.

ಇನ್ನು ಯಲ್ಲಮ್ಮ ದೇವಸ್ಥಾನ ಕೂಡ ಇನ್ನು ಓಪನ್ ಆಗಿಲ್ಲ ಎಂಬ ಕುರಿತು ಮಾತನಾಡಿದ ಲಕ್ಷ್ಮಣ ಸವದಿ ದೇವಸ್ಥಾನದಲ್ಲಿ ಪ್ರಸಾದ ತೆಗೆದುಕೊಳ್ಳುವುದು, ಒಂದು ಕಡೆ ಜನದಟ್ಟಣೆ ಸೇರುವುದರಿಂದ ಕೋವಿಡ್ ಹರಡುವ ಸಾಧ್ಯತೆ ಇರುತ್ತದೆ. ಸಾರ್ವಜನಿಕ ಸಮಾರಂಭಗಳಿಗೂ ದೇವಸ್ಥಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದರು. ಇನ್ನು ಯಾವುದೇ ರೀತಿ ಕೋವಿಡ್ ಎಫೆಕ್ಟ್ ಆಗದಂತೆ ಕಾರ್ಯಕ್ರಮದಲ್ಲಿ ಭೋಜನದ ವ್ಯವಸ್ಥೆ ಮಾಡುತ್ತೇವೆ ಎಂದರು. ಇದೇ ವೇಳೆ ಕೊರೊನಾ ನಿಯಂತ್ರಣಕ್ಕೆ ಬಂದಿರುವುದಿರಂದ ಕೋವಿಡ್ ನಿಯಮ ಸಡಿಲಿಕೆ ಮಾಡುವ ನಿಟ್ಟಿನಲ್ಲಿಯೂ ಚಿಂತಿಸುತ್ತಿದ್ದೇವೆ ಎಂದು ಹೇಳಿದರು.

ರಾಷ್ಟ್ರೀಯ ಅಧ್ಯಕ್ಷರು ಬರುತ್ತಿದ್ದಾರೆ, ಮತ್ತೊಂದು ಕಡೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ ಎಂಬ ವಿಚಾರಕ್ಕೆ ಪ್ರತಿಕ್ರಯಿಸಿದ ಲಕ್ಷ್ಮಣ ಸವದಿ ಒಂದು ಕುಟುಂಬ ಎಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸಗಳು ಇರುತ್ತವೆ. ಅನೇಕರಿಗೆ ಸಚಿವರಾಗಬೇಕು, ಹುದ್ದೆಗಳನ್ನು ಪಡೆದುಕೊಂಡು ಜನಸೇವೆ ಮಾಡಬೇಕು ಎಂಬ ಅಪೇಕ್ಷೆ ಇರುತ್ತದೆ. 34ಕ್ಕಿಂತಲೂ ಹೆಚ್ಚು ಸಚಿವರನ್ನು ಮಾಡಲು ಬರುವುದಿಲ್ಲ. ಈಗ ಅಳೆದು ತೂಗಿ ಕೆಲವೊಂದಿಷ್ಟು ಜನರನ್ನು ಸಚಿವರನ್ನಾಗಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ಅವಕಾಶ ಸಿಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಶ್ರೀಮಂತ ಪಾಟೀಲ್, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Tags:

error: Content is protected !!