hubbali

ರಾಜಕಾರಣಕ್ಕಾಗಿ ಗಡಿಕ್ಯಾತೆ ಹೇಳಿಕೆ ನೀಡುವುದು ಉದ್ದವ್ ಠಾಕ್ರೆಗೆ ಶೋಭೆ ತರುವುದಿಲ್ಲ: ಕುರುಬೂರು ಶಾಂತಕುಮಾರ್

Share

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜಕೀಯಗೋಷ್ಕರ ಗಡಿ ಖ್ಯಾತೆ ತಗೆಯುವುದು ಉದ್ದವ್ ಠಾಕ್ರೆಗೆ ಶೋಭೆ ತರುವದಲ್ಲ ಎಂದು ರಾಜ್ಯ ರೈತ ಸಂಘದ ಮುಖಂಡ ಕುರುಬೂರು ಶಾಂತಕುಮಾರ ಹೇಳಿದರು.

ಹುಬ್ಬಳ್ಳಿ ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಮುಖಂಡ ಕುರುಬೂರು ಶಾಂತಕುಮಾರ ಮಾತನಾಡಿ, ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಜನರ ಓಲೈಕೆಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ನೆಲ, ಜಲ,ಭಾಷೆ ವಿಚಾರದಲ್ಲಿ ಯಾರೇ ಆದರೂ ಈ ರೀತಿ ಹೇಳಿಕೆ ನೀಡಬಾರದು. ಉದ್ಧವ್ ಠಾಕ್ರೆ ಈ ರೀತಿ ದ್ವಂದ್ವ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಗಡಿ ವಿಚಾರದಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ಮಹಾದಾಯಿ ನೀರು ಕೇಳಿದಾಗಲೂ ಇದೇ ರೀತಿ ವಿರೋಧ ಮಾಡಿದ್ರು. ಅವರಿಗೆ ಮಾನವೀಯತೆ ಎನ್ನುವುದೇ ಇಲ್ಲ ಎಂದು ಕಿಡಿಕಾರಿದರು.

ಒಟ್ಟಿನಲ್ಲಿ ಮಹಾ ಸಿಎಂ ಟ್ವೀಟ್ ರೈತ ವಲಯದಲ್ಲೂ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಇದು ರಾಜಕೀಯ ಪ್ರೇರಿತ, ಮಹದಾಯಿ ವಿಚಾರದಲ್ಲೂ ಮಹಾರಾಷ್ಟ್ರದ್ದು ಮಾನವೀಯತೆ ಮರೆತ ವರ್ತನೆ ಎಂಬ ಅಭಿಪ್ರಾಯಗಳು ಕೇಳತೊಡಗಿವೆ.

Tags:

error: Content is protected !!