Uncategorized

ಯುರೋಪ-ಅಮೆರಿಕಾ ಪಾಲ್ಸಗಳಂತೆ ಗೋಕಾಕ್ ಪಾಲ್ಸ ಅಭಿವೃದ್ಧಿ..ರಮೇಶ ಜಾರಕಿಹೊಳಿ

Share

ಅಮೆರಿಕಾ ಮತ್ತು ಯುರೋಪ ದೇಶಗಳಲ್ಲಿ ಇರುವಂತೆ ಗೋಕಾಕ್ ಪಾಲ್ಸನ್ನು ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಪಡಿಸುತ್ತೇವೆ. ಶಿವಮೊಗ್ಗ ಜೋಗ್ ಪಾಲ್ಸ್ ಮತ್ತು ನಮ್ಮ ಗೋಕಾಕ್ ಪಾಲ್ಸ್ ಎರಡೂ ಒಂದೇ ರೀತಿಯಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಬೆಳಗಾವಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ ಜಾರಕಿಹೊಳಿ ಬೋರ್ಡ್ ಮಿಟಿಂಗ್‍ನಲ್ಲಿ ಪ್ರಸ್ತಾವನೆ ಸಲ್ಲಿಸಬೇಕಿದೆ. ಗೋಕಾಕ್‍ನಲ್ಲಿ 1 ಸಾವಿರ ಕೋಟಿ ಹಾಗೂ ಅಥಣಿಯಲ್ಲಿ 2400 ಕೋಟಿ ಯೋಜನೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಇನ್ನು ಗೋಕಾಕ್ ಪಾಲ್ಸ್‍ನ್ನು ಅಮೆರಿಕಾ ಮತ್ತು ಯುರೋಪ ದೇಶಗಳಲ್ಲಿನ ಪಾಲ್ಸ್‍ಗಳಂತೆ ಅಭಿವೃದ್ಧಿ ಮಾಡುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದರು.
ಇನ್ನು ಚಿಕ್ಕೋಡಿ ಬೆಳಗಾವಿ ವಿಭಾಗದಲ್ಲಿ 12 ಏತ ನೀರಾವರಿ ಯೋಜನೆ ಕೈಗೆತ್ತಿಕೊಂಡಿದ್ದೇವೆ. ಸರ್ವೇ ಕಾರ್ಯ ಪ್ರಾರಂಭವಾಗಿದೆ. ಗಟ್ಟಿ ಬಸವಣ್ಣ ಏತ ನೀರಾವರಿಗೆ ಒಂದು ವಾರದೊಳಗೆ ಟೆಂಡರ್ ಕರೆಯುತ್ತೇವೆ. ಬಳ್ಳಾರಿ ನಾಲಾದ ಕಾಮಾಗಾರಿ ಆರಂಭ ಬಗ್ಗೆ ಚರ್ಚೆ ನಡೆದಿದೆ. ಈ ಸಂಬಂಧ ಶೀಘ್ರವೇ ಸ್ಥಳಕ್ಕೆ ಭೇಟಿ ನೀಡಿ ಕೆಲಸ ಆರಂಭಿಸುತ್ತೇವೆ ಎಂದು ಹೇಳಿದರು. ಬರುವ ಎರಡು ವರ್ಷದಲ್ಲಿ ಬೆಳಗಾವಿ ಜಿಲ್ಲೆಯ ಮೂಲೆ ಮೂಲೆಗೂ, ಬಾಗಲಕೋಟೆ, ವಿಜಯಪುರ, ಬಳ್ಳಾರಿ ಸೇರಿದಂತೆ ಮುಂತಾದ ಕಡೆ ನೀರಾವರಿ ಯೋಜನೆ ಆರಂಭಿಸುತ್ತೇವೆ ಎಂದು ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ಪಾಲಿಕೆ ಮುಂದೆ ಕನ್ನಡ ಧ್ವಜ ಸ್ತಂಭ ಸ್ಥಾಪನೆ ಮಾಡಿದ್ದಕ್ಕೆ ನಾಡದ್ರೋಹಿ ಎಂಇಎಸ್ ಮುಖಂಡರ ವಿರೋಧ ವಿಚಾರಕ್ಕೆ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ ಜಾರಕಿಹೊಳಿ ಅದಕ್ಕೆ ಮಹತ್ವ ಕೊಡಬೇಡಿ. ಕರ್ನಾಟಕದಲ್ಲಿಯೇ ಕನ್ನಡಕ್ಕೆ ಆಧ್ಯತೆ ಹೀಗಾಗಿ ಅದಕ್ಕೆ ಜಾಸ್ತಿ ಮಹತ್ವ ಕೊಡಬೇಡಿ ಎಂದಷ್ಟೆ ಹೇಳಿದರು.

ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಆಧಾರದ ಮೇಲೆ ಸ್ಪರ್ಧಿಸಲು ಮುಂದಾಗಿದ್ದು. ಬಿಜೆಪಿ ಕೂಡ ಪಕ್ಷದ ಆಧಾರದಿಂದ ಚುನಾವಣೆ ಸ್ಪರ್ಧಿಸುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮೇಶ ಜಾರಕಿಹೊಳಿ ಮೈಸೂರು, ಬೆಂಗಳೂರು, ಗುಲಬರ್ಗಾ, ಮಂಗಳೂರು ಇಲ್ಲಿನ ಸಮಸ್ಯೆಗಳು ಬೇರೆ, ಬೆಳಗಾವಿಯ ಸಮಸ್ಯೆ ಬೇರೆಯಾಗಿದೆ. ಹೀಗಾಗಿ ಸ್ಥಳೀಯ ಶಾಸಕರು, ನಾಯಕರು, ವರಿಷ್ಠರು ಕೂಡಿಕೊಂಡು ಚರ್ಚಿಸಿ ನಿರ್ಧಾರ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆ ಬೆಳಗಾವಿ ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ನೀರಾವರಿ ಅಭಿವೃದ್ಧಿ ಮಾಡುವ ಗುರಿ ಇಟ್ಟುಕೊಂಡಿದ್ದು. ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ರಮೇಶ ಜಾರಕಿಹೊಳಿ ಭರವಸೆ ನೀಡಿದರು.

 

 

Tags:

error: Content is protected !!