Belagavi

ಯಳ್ಳೂರು ಕೆಎಲ್‍ಇ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದು ಧೈರ್ಯ ತುಂಬಿದ ದಿಗ್ದರ್ಶಕ ಮಂಡಳಿ

Share

ಬೆಳಗಾವಿ ತಾಲೂಕು ಯಳ್ಳೂರು ಕೆಎಲ್‍ಇ ಚಾರಿಟೇಬಲ್ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಸ್ಪತ್ರೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಸಹಿತ ವೈದ್ಯರು, ಆಸ್ಪತ್ರೆಯ ಹಿರಿಯ ನಾಗರಿಕರಿಗೆ ಕೋವಿಶೀಲ್ಡ್ ಲಸಿಕೆ ನೀಡಿ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕೊರೋನಾ ಸೋಂಕು ತಡೆಗೆ ದೇಶಾದ್ಯಂತ ನಡೆದಿರುವ ಕೋವಿಶೀಲ್ಡ್ ಲಸಿಕೆ ಅಭಿಯಾನದ ಅಂಗವಾಗಿ ಯಳ್ಳೂರು ಕೆಎಲ್‍ಇ ಚಾರಿಟೇಬಲ್ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಆಸ್ಪತ್ರೆಯ ದಿಗ್ದರ್ಶಕ ಮಂಡಳಿ ಸಹಿತ ಪದಾಧಿಕಾರಿಗಳು, ಆರೋಗ್ಯ ಸಿಬ್ಬಂದಿ ಮೊದಲ ಆದ್ಯತೆಯಾಗಿ ಕೋವಿಶೀಲ್ಡ್ ಲಸಿಕೆ ಪಡೆದು ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿ ಲಸಿಕೆಯ ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಿ, ಆತಂಕ ದೂರ ಮಾಡಿದರು. ಏನಾದರೂ ಸ್ವಲ್ಪ ವ್ಯತ್ಯಾಸ ಕಾಣಬಹುದು. ಅದಕ್ಕಿಂತ ಹೆಚ್ಚು ಪರಿಣಾಮ ಇಲ್ಲ ಎಂದು ನರ್ಸ್‍ಗಳು ಸಮಜಾಯಿಸಿ ನೀಡಿದರು. ಈ ಸಂದರ್ಭದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಸಿ.ಧಾರವಾಡ ಮಾತನಾಡಿ, ಕೋವಿಶಿಲ್ಡ್ ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ಇನ್ನೂ ಸಂಶಯ ಇದೆ. ಇದಕ್ಕಾಗಿ ಹಿಂದೇಟು ಹಾಕಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಜಂಟಿ ನಿರ್ದೇಶಕನಾಗಿ ನಿವೃತ್ತನಾಗಿರುವ ನಾನು ಕೆಎಲ್‍ಇ ಆಸ್ಪತ್ರೆಯಲ್ಲಿ 6ನೇ ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಲಸಿಕೆ ಬಗ್ಗೆ ಅನಗತ್ಯ ಆತಂಕ ಬೇಡ. ನಮ್ಮ ಸುರಕ್ಷತೆಗಾಗಿ ಲಸಿಕೆ ಬಿಡುಗಡೆ ಮಾಡಲಾಗಿದೆ. ಆದರೂ ಶೇ.40 ರಿಂದ ಶೇ.50ರಷ್ಟು ಜನ ಮಾತ್ರ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಆತಂಕ ಬಿಟ್ಟು ಎಲ್ಲರೂ ಲಸಿಕೆ ಪಡೆಯಬೇಕು. ಆತ್ಮನಿರ್ಭರ ಭಾರತ ಸಂಕಲ್ಪ ಸಾಕಾರಗೊಳಿಸಲು ಎಲ್ಲರೂ ಮುಂದೆ ಬನ್ನಿ ಎಂದರು.

ಈ ವೇಳೆ ಲಸಿಕೆ ಹಾಕಿಸಿಕೊಂಡ 79 ವರ್ಷದ ಡಾ.ಸೌದಾಗಾರ ಮಾತನಾಡಿ, ಲಸಿಕೆ ಪಡೆದರೆ ಅದಾಗುತ್ತದೆ, ಇದಾಗುತ್ತದೆ ಎಂಬುದೆಲ್ಲ ಸುಳ್ಳು. ಆರೋಗ್ಯ ಸುರಕ್ಷತೆಗಾಗಿ ಲಸಿಕೆ ನೀಡಲಾಗುತ್ತಿದೆ. ಭಯ ಬಿಟ್ಟು ಲಸಿಕೆ ಪಡೆಯಬೇಕು ಎಂದರು. ಉತ್ಸಾಹದಿಂದ ಲಸಿಕೆ ಪಡೆದ ಕೆಎಲ್‍ಇ ಆಸ್ಪತ್ರೆಯ ನಿರ್ದೇಶಕ 81 ವರ್ಷದ ಡಾ.ಎಚ್.ಬಿ.ರಾಜಶೇಖರ್ ಮಾತನಾಡಿ, ವೈದ್ಯ, ಪ್ರಾಧ್ಯಾಪಕ, ವಿಜ್ಞಾನಿಯಾಗಿ ಹೇಳುತ್ತಿದ್ದೇನೆ. ಆತಂಕಪಡದೇ ಲಸಿಕೆ ಹಾಕಿಸಿಕೊಳ್ಳಿ. ಯಾವುದೇ ಅಡ್ಡಪರಿಣಾಮಗಳ ಭಯ ಬೇಡ ಎಂದರು.

ಯಳ್ಳೂರು ಕೆಎಲ್‍ಇ ಚಾರಿಟೆಬಲ್ ಆಸ್ಪತ್ರೆಯಲ್ಲಿ ನಡೆದ ಲಸಿಕೆ ಅಭಿಯಾನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಮುನ್ಯಾಳ, ವೈದ್ಯಾಧಿಕಾರಿ ಡಾ.ಗಡಾದ, ತಾಲೂಕು ಆರೋಗ್ಯಾಧಿಕಾರಿ ಡಾ.ಮಾಸ್ತಿಹೊಳಿ, ಆರೋಗ್ಯ ಸಿಬ್ಬಂದಿ ಮತ್ತಿತರರು ಇದ್ದರು.

 

Tags:

error: Content is protected !!