Uncategorized

ಯಮಕನಮರಡಿ ಫೈರಿಂಗ್ ಕೇಸ್..ಮತ್ತೊರ್ವ ಆರೋಪಿ ಅಂದರ್

Share

ಹುಕ್ಕೇರಿ ತಾಲೂಕಿನ ಯಮಕನಮರಡಿಯಲ್ಲಿ ಗುಂಡಿನ ದಾಳಿ ಕೇಸ್‍ಗೆ ಸಂಬಂಧಿಸಿದಂತೆ ಮತ್ತೊರ್ವ ಆರೋಪಿಯನ್ನು ಬಂಧಿಸುವಲ್ಲಿ ಯಮಕನಮರಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು ಡಿ.16ರಂದು ಗ್ರಾಮ ಪಂಚಾಯತಿ ಚುನಾವಣೆ ಪ್ರಚಾರ ಮುಗಿಸಿ ಯಮಕನಮರಡಿ ಗ್ರಾಮದ ಬಸದಿಯ ಹತ್ತಿರ ಕಟ್ಟೆಯ ಮೇಲೆ ಕುಳಿತಿದ್ದ ಕಾಂಗ್ರೆಸ್ ಮುಖಂಡ ಭರಮಾ ಭೂಪಾಲ್ ದುಪದಾಳಿ ಮೇಲೆ ಮುಸಕುಧಾರಿಯಾಗಿ ಬಂದಿದ್ದ ಆರೋಪಿಯೊರ್ವ ಪಿಸ್ತೂಲ್‍ನಿಂದ ಗುಂಡಿನ ದಾಳಿ ಮಾಡಿ ಪರಾರಿಯಾಗಿದ್ದ. ಈ ವೇಳೆ ಅದೃಷ್ಟವಶಾತ್ ಭರಮಾ ಭೂಪಾಲ್ ದುಪದಾಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ಘಟನೆ ಇಡೀ ಬೆಳಗಾವಿ ಜಿಲ್ಲೆಯನ್ನೆ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಯಮಕನಮರಡಿ ಠಾಣೆ ಪೊಲೀಸರು ಜ.1ರಂದು ಗುಂಡಿ ಹಾರಿಸಿ ಪರಾರಿಯಾಗಿದ್ದ ಯಮಕನಮರಡಿ ಗ್ರಾಮದ ವಿನಾಯಕ ಸೋಮಶೇಖರ್ ಹೊರಕೇರಿಯನ್ನು ಬಂಧಿಸಿದ್ದರು.

ಈತನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ವಿನಾಯಕ ಪ್ರೀತಿಸಿದ್ದ ಹುಡುಗಿಯನ್ನು ಭರಮಾ ಭೂಪಾಲ್ ದುಪದಾಳಿ ಬೇರೆ ಕಡೆ ಎಂಗೇಜ್‍ಮೆಂಟ್ ಮಾಡಿ ಕೊಟ್ಟಿದ್ದೆ ಕಾರಣ ಎಂದು ಬಾಯಿ ಬಿಟ್ಟಿದ್ದ. ಅದೇ ರೀತಿ ಇದಾದ ಮಾರನೇ ದಿನ ಜ.2ರಂದು ಆರೋಪಿ ವಿನಾಯಕನಿಗೆ ಪಿಸ್ತೂಲ್ ಮತ್ತು ರೌಂಡ್ಸ್ ಕೊಟ್ಟಿದ್ದ ಮಹಾರಾಷ್ಟ್ರದ ಗಡಹಿಂಗ್ಲಜ ತಾಲೂಕಿನ ದುಂಡಗಾ ಗ್ರಾಮದ ನಿಖಿಲ್ ವಸಂತ ಭೋಸಲೆಯನ್ನು ಬಂಧಿಸಲಾಗಿತ್ತು. ಈಗ ಇಂದು ಶುಕ್ರವಾರ ಈ ಕೇಸ್‍ನ ಇನ್ನೊರ್ವ ಆರೋಪಿ ಮಹಾರಾಷ್ಟ್ರದ ಗಡಹಿಂಗ್ಲಜ ತಾಲೂಕಿನ ಮುತ್ನಾಳ ಗ್ರಾಮದ ಯುವರಾಜ್ ಸುರ್ಯಾಜಿ ಅಲಿಯಾಸ್ ಸುರೇಶ್ ನಾಯಿಕ್‍ನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯಿಂದ ಎರಡು ಕಂಟ್ರಿ ಪಿಸ್ತೂಲ್, ಒಂದು ಖಾಲಿ ಮ್ಯಾಗಜಿನ್ ಹಾಗೂ ಎರಡು ಜೀವಂತ ರೌಂಡ್ಸಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಯಮಕನಮರಡಿ ಠಾಣೆ ಪೊಲೀಸರ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Tags:

error: Content is protected !!