ಚಿಕ್ಕೋಡಿ ತಾಲೂಕಿನ ಯಡೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 73 ಫ್ರಂಟ್ಲೈನ್ ಕೊರೋನಾ ವಾರಿಯರ್ಸಗಳಿಗೆ ಕೋರೋನಾ ಲಸಿಕೆಯನ್ನು ನೀಡಲಾಯಿತು.ಹೌದು ಮಹಾಮಾರಿ ಕೊರೋನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಹಗಲು-ರಾತ್ರಿಯೆನ್ನದೆ ಕಾರ್ಯನಿರ್ವಹಿಸಿದ ಫ್ರಂಟ್ಲೈನ್ ವಾರಿಯರ್ಸ್ ಗಳಾದ ವೈದ್ಯರುಗಳು, ನರ್ಸುಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಇವತ್ತು ಚಿಕ್ಕೋಡಿ ತಾಲೂಕಿನ ಯಡೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ನಿಯಂತ್ರಕ ಲಸಿಕೆಯನ್ನು ನೀಡಲಾಯಿತು. ಯಡೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯಾಪ್ತಿಯಲ್ಲಿ ಬರತಕ್ಕಂತಹ ಸುಮಾರು 73 ಫ್ರಂಟ್ಲೈನ್ ಕೊರೋನಾ ವಾರಿಯರ್ಸ್ ಗಳಿಗೆ ಲಸಿಕೆಯನ್ನು ನೀಡಲಾಯಿತು. ಯಡೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಗಳಾದ ಡಾ! ಸಂಜಯಕುಮಾರ ಬೆಣ್ಣೆ ಇವರ ನೇತೃತ್ವದಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ನಂತರ ಇನ್ ನ್ಯೂಸ್ ಜೊತೆ ಮಾತನಾಡಿದ ಡಾ! ಸಂಜಯಕುಮಾರ ಬೆಣ್ಣೆಯವರು ಮೊದಲನೇ ಹಂತವಾಗಿ ಯಡೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕೊರೋನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸಿದ ವೈದ್ಯರು ನರ್ಸುಗಳು, ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಇವತ್ತು ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಇವತ್ತು ಸುಮಾರು 73 ಫ್ರಂಟ್ಲೈನ್ ವಾರಿಯರ್ಸ್ಗಳಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಹಾಗೂ ಈ ಲಸಿಕೆಯನ್ನು ಪಡೆದುಕೊಂಡವರ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಬೀಳುತ್ತಿಲ್ಲ ಎಂದು ಡಾ! ಸಂಜಯ ಕುಮಾರ ಬೆಣ್ಣೆ ತಿಳಿಸಿದರು.
ನಂತರ ಲಸಿಕೆಯನ್ನು ಪಡೆದುಕೊಂಡಂತಹ ಆಶಾ ಕಾರ್ಯಕರ್ತರು ಮಾತನಾಡಿ ನಾವು ಕೊರೋನಾ ಸಂದರ್ಭದಲ್ಲಿ ಅತ್ಯಂತ ಭಯದಿಂದ ಕಾರ್ಯವನ್ನು ನಿರ್ವಹಿಸುತ್ತಿದ್ದವು. ಆದರೆ ಇವತ್ತು ಕೊರೋನಾ ಲಸಿಕೆಯನ್ನು ಪಡೆದುಕೊಂಡ ನಂತರ ಮುಂದಿನ ದಿನಗಳಲ್ಲಿ ಧೈರ್ಯವಾಗಿ ವಾರಿಯರ್ಸ್ ಗಳಾಗಿ ಕಾರ್ಯವನ್ನು ನಿರ್ವಹಿಸುತ್ತವೆ. ಹಾಗೂ ಲಸಿಕೆಯನ್ನು ಪಡೆದುಕೊಂಡ ನಂತರ ನಮ್ಮಲ್ಲಿ ಯಾವುದೇ ರೀತಿಯಾದ ಅಡ್ಡಪರಿಣಾಮಗಳು ಬಿಳುತ್ತಿಲ್ಲ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.ಒಟ್ಟಿನಲ್ಲಿ ಕೊರೋನಾ ಸಂಧರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ ಕೋರೋನಾ ವಾರಿಯರ್ಸ್ ಗಳಿಗೆ ಕೊರೋನಾ ಲಸಿಕೆಯನ್ನು ನೀಡಲಾಯಿತು.ಮುಂಬರುವ ದಿನಗಳಲ್ಲಿ ವಾರಿಯರ್ಸಗಳಾಗಿ ಮತ್ತಷ್ಟು ಧ್ಯರ್ಯಶಾಲಿಯಾಗಿ ಕಾರ್ಯನಿರ್ವಹಿಸಲಿ ಎನ್ನುವುದು ನಮ್ಮ ಆಶಯವಾಗಿದೆ.