Nippani

ಯಕ್ಸಂಬಾ ಆರೋಗ್ಯ ಕೇಂದ್ರದಲ್ಲಿ ಲಸಿಕೆ ವಿತರಣೆ ತಾಲೀಮು ವೀಕ್ಷಿಸಿದ ಸಚಿವೆ ಶಶಿಕಲಾ ಜೊಲ್ಲೆ

Share

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಇಂದು ಯಕ್ಸಂಬಾ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೊರೋನಾ ಲಸಿಕೆ ವಿತರಣೆ ವ್ಯವಸ್ಥೆಯ ತಾಲೀಮು ವೀಕ್ಷಿಸಿದರು. ಬಳಿಕ ಕೊರೋನಾ ಲಸಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಿಪ್ಪಾಣಿ, ಯಕ್ಸಂಬಾ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಜಿಲ್ಲೆಯ 7 ಕಡೆ ಕೊರೋನಾ ಲಸಿಕೆ ವಿತರಣೆ ವ್ಯವಸ್ಥೆಯ ತಾಲೀಮು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಇಂದು ಯಕ್ಸಂಬಾ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೊರೋನಾ ಲಸಿಕೆ ವಿತರಣೆ ವ್ಯವಸ್ಥೆಯ ತಾಲೀಮು ವೀಕ್ಷಿಸಿದರು. ಅಧಿಕಾರಿಗಳು ಕೊರೋನಾ ಲಸಿಕೆ ತಾಲೀಮಿನ ಬಗ್ಗೆ ವಿವರಣೆ ನೀಡಿದರು.

ಬಳಿಕ ಮಾಧ್ಯಮಗಳೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಜಿಲ್ಲೆಯ 7 ಕಡೆ ಕೊರೋನಾ ಲಸಿಕೆ ವಿತರಣೆ ವ್ಯವಸ್ಥೆಯ ತಾಲೀಮು ನಡೆಯುತ್ತಿದೆ. ಯಕ್ಸಂಬಾದಲ್ಲೂ ಎಲ್ಲ ಸಿದ್ಧತೆ ಕೈಗೊಂಡು ತಾಲೀಮು ಆರಂಭವಾಗಿದೆ. ಐವರು ಅಧಿಕಾರಿಗಳು ಆರೋಗ್ಯ ಕಾರ್ಯಕರ್ತರೊಂದಿಗೆ ಸೇರಿ ಕೋವಿಡ್ 19 ತಡೆಗೆ ಲಸಿಕೆ ನೀಡುವ ತಾಲೀಮು ಆರಂಭಿಸಿದ್ದಾರೆ. ತಾಪಮಾನ ಪರೀಕ್ಷಿಸಿ, ಆರೋಗ್ಯ ತಪಾಸಣೆ ನಡೆಸಿ ಪರೀಕ್ಷಾರ್ಥ ಲಸಿಕೆ ನೀಡಲಾಗುತ್ತಿದೆ. ಅಡ್ಡ ಪರಿಣಾಮಗಳಾದರೆ ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆಯೂ ಅಣಕು ಪ್ರದರ್ಶನ ನೀಡಲಾಗಿದೆ. ಅರ್ಧ ಗಂಟೆ ನಿಗಾದಲ್ಲಿರಿಸಿ ಪರೀಕ್ಷೆ ನಡೆಸಲಾಗಿದೆ. ಮೊದಲಿಗೆ ಆರೋಗ್ಯ ಸಿಬ್ಬಂದಿಗೆ ಲಸಿಕೆ ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು, ನಂತರ ಹಂತ ಹಂತವಾಗಿ ಎಲ್ಲ ಜನರಿಗೂ ಲಸಿಕೆ ನೀಡಲಾಗುವುದು. ಜನವರಿ 15ರ ನಂತರ ಕೋವಿಡ್ ಲಸಿಕೆ ಅಧಿಕೃತವಾಗಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಚಿಕ್ಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಂಧೆ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

 

Tags:

error: Content is protected !!