ಅಭಿವೃದ್ಧಿ ಕೆಲಸಗಳಿರಲಿ, ಕಲ್ಯಾಣ ಕಾರ್ಯಕ್ರಮಗಳಿರಲಿ, ಯೋಜನೆಗಳಿರಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಎಲ್ಲದಕ್ಕೂ ವಿರೋಧ ಮಾಡುತ್ತಲೇ ಹೊರಟಿದೆ. ವಿರೋಧ ಮಾಡುವುದೇ ಕಾಂಗ್ರೆಸ್ ಕೆಲಸವಾಗಿದೆ, ಕಾಂಗ್ರೆಸ್ ಮಾತನಾಡಿದೆ, ಕೆಲಸ ಆಗಿಲ್ಲ, ಆದರೆ ಪ್ರಧಾನಿ ಮೋದಿ ಕೆಲಸ ಮಾಡಿ ಮಾತನಾಡುತ್ತಿದ್ದಾರೆ ಎಂದು ರಾಷ್ಟಿಯ ಬಿಜೆಪಿ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಹೇಳಿದ್ದಾರೆ.
ವೈ.ಓ: ಶಿವಮೊಗ್ಗದಲ್ಲಿ ಭಾನುವಾರ ಬಿಜೆಪಿ ಕಾರ್ಯಕಾರಿಣಿ ಸಮಾರೋಪ ಸಮಾರಂಭದಲ್ಲಿ ರಾಷ್ಟಿçÃಯ ಬಿಜೆಪಿ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಮಾತನಾಡಿ, ತ್ರಿವಳಿ ತಲಾಖ್ ರದ್ದು, ಸಂವಿಧಾನದ ೩೭೦ ವಿಧಿ ಅನುಷ್ಠಾನ, ಗೋ ಹತ್ಯೆ ನಿಷೇಧ ಹೀಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ ಕಾರ್ಯಗಳನ್ನು ಹೇಳಿದಂತೆ ಮಾಡಿ ತೋರಿಸಿದ್ದೇವೆ. ಹೇಳಿದ್ದನ್ನು ಮಾಡಿ ತೋರಿಸುವ ಛಾತಿ ಇರುವ ಏಕೈಕ ಪ್ರಧಾನಿ ಎಂದರೆ ಪ್ರಧಾನಿ ಮೋದಿ ಎಂದರು.
ಇನ್ನು ಕಾಂಗ್ರೆಸ್ ವರಿಷ್ಠರಾಗಿರುವ ರಾಹುಲ್‌ಗಾಂಧಿ ಅವರಿಗೆ ದೇಶದ ಸಂಸ್ಕೃತಿಯೇ ಗೊತ್ತಿಲ್ಲ. ಯಾವುದೇ ಸಮಾರಂಭ ಇರಲಿ ಹೇಳಿಕೊಟ್ಟದ್ದನ್ನಷ್ಟೇ ಮಾಡುವುದು ಅವರ ಜಾಯಮಾನವಾಗಿದೆ. ಹೊಸ ವರ್ಷಾಚರಣೆಗೆ ಇಟಲಿಗೆ ತೆರಳಿದ್ದ ರಾಹುಲ್‌ಗಾಂಧಿ ಅವರಿಗೆ ದೇಶದ ಸಂಸ್ಕೃತಿ ಏನು ಗೊತ್ತು? ಎಂದರು.
ಚುನಾವಣೆಯಲ್ಲಿ ಹೊಂದಾಣಿಕೆ ಪ್ರಶ್ನೆ ಬಂದರೆ ನಾವು ಜೆಡಿಎಸ್ ಜೊತೆ ಹೋಗುವುದಿಲ್ಲ. ಜೆಡಿಎಸ್ ಅಳಿಯುವ ಹಂತದಲ್ಲಿರುವ ಪಕ್ಷ. ಉಪಚುನಾವಣೆ ನಂತರ ಇದು ಇನ್ನಷ್ಟು ಸ್ಪಷ್ಟವಾಗಲಿದೆ. ಬಿಜೆಪಿಗೆ ಬಹುಮತ ಇರುವಾಗ ಜೆಡಿಎಸ್ ಜೊತೆ ಸಂಬAಧ ಅಗತ್ಯವೂ ಇಲ್ಲ ಎಂದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಆಗಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ೧೩೦-೧೫೦ ಸೀಟು ಗೆಲ್ಲಲು ಕಾರ್ಯಕರ್ತರು ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು. ತಿಂಗಳಲ್ಲಿ ೭ ದಿನ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಬೇಕು ಎಂದರು.
ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್, ಸಂಸದ ಬಿ.ವೈ.ರಾಘವೇಂದ್ರ, ಸಚಿವ ಕೆ.ಎಸ್. ಈಶ್ವರಪ್ಪ, ಡಿ.ಹೆಚ್.ಶಂಕರಮೂರ್ತಿ, ಭಗವಂತ ಖೂಬ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಬಿಜೆಪಿ ರಾಷ್ಟಿçÃಯ, ರಾಜ್ಯ ಮುಖಂಡರು, ಶಾಸಕರು, ಸಚಿವರು ಪಾಲ್ಗೊಂಡಿದ್ದರು.