Vijaypura

ಮೃತ ಬಿಜೆಪಿ ಮುಖಂಡನ ಮನೆಗೆ ಡಿಸಿಎಂ ಗೋವಿಂದ ಕಾರಜೋಳ ಭೇಟಿ

Share

ಕಳೆದ ಡಿಸೆಂಬರ್ 30ರಂದು ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದ ಬಿಜೆಪಿ ಮುಖಂಡ, ಬಿಜೆಪಿಯ ಚಡಚಣ ತಾಲೂಕ ಯುವಮೋರ್ಛಾದ ಅಧ್ಯಕ್ಷ, ಉಮರಜ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿದ್ದ ಸಿದ್ಧರಾಮ ಗುಡ್ಡಾಪುರ್ ಅವರ ಮನೆಗೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ಶನಿವಾರದಂದು ಭೇಟಿ ನೀಡಿ.

ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆಯಲ್ಲಿ ಮಾತನಾಡಿದ ಗೋವಿಂದ ಕಾರಜೋಳ ಅವರು ನಿಮ್ಮ ಕುಟುಂಬದ ಕಷ್ಟದಲ್ಲಿ ನಾನು ಭಾಗಿಯಾಗಿರುತ್ತೇನೆ. ಹುಟ್ಟು ಸ್ವಾಭಾವಿಕವಾಗಿ ಇದ್ದರೂ ಕೂಡ ಸಾವು ಪ್ರತಿಯೊಬ್ಬರಿಗೂ ಖಚಿತವಾಗಿರುತ್ತದೆ. ಹುಟ್ಟು ಸಾವಿನ ಮಧ್ಯೆ ನಾವು ಮಾಡಿರುವ ಕೆಲಸ ಕಾರ್ಯಗಳು ಅವರ ಜೀವನದಲ್ಲಿ ಸಾಧನೆಗೆ ಮೈಲುಗಲ್ಲುಗಳಾಗಿರುತ್ತವೆ.

ಸಣ್ಣ ವಯಸ್ಸಿನಲ್ಲಿಯೇ ಗ್ರಾಮದ, ತಾಲೂಕಿನ, ಸಮಾಜದ ಬಗ್ಗೆ ಬಹಳ ಕಳಕಳಿಯಿಂದ ಕೆಲಸ ಮಾಡುವವರು. ಕಚೇರಿಗಳಿಗೆ ತಾವೇ ಸ್ವತಹ ಅಲೆದಾಡಿ ಕೆಲಸಗಳನ್ನು ಮಾಡುವಂತಹ ವ್ಯಕ್ತಿತ್ವ ಅವರದಾಗಿತ್ತು. ಅವರು ಹಾಕಿಕೊಂಡಿರುವ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿರುವ ಜವಾಬ್ದಾರಿ ಅವರ ಬಂಧು-ಬಳಗದವರು, ಗ್ರಾಮದ ಸಮಾಜದ ಪ್ರಮುಖ ಮುಖಂಡರು ಹಾಗೂ ಗ್ರಾಮಸ್ಥರ ಜವಾಬ್ದಾರಿಯಾಗಿದೆ. ಅಲ್ಲದೆ ಅವರ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಸಂಪೂರ್ಣ ಸಹಕಾರ ನಾನು ಕೂಡ ನೀಡುತ್ತೇನೆ ಎಂದು ಅವರು ಹೇಳಿದರು.

ಯಾವುದೇ ಒಬ್ಬ ವ್ಯಕ್ತಿಗೆ ನಿಜವಾದಂತಹ ಶ್ರದ್ಧಾಂಜಲಿ ನಾವು ಸಲ್ಲಿಸುವುದು ಎಂದರೆ ಅವನು ಜೀವನದಲ್ಲಿ ಹಾಕಿಕೊಂಡಿರುವ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವುದು, ಪೂರ್ಣಗೊಳಿಸುವ ಕಾರ್ಯವೇ ನಿಜವಾದ ಶೃದ್ಧಾಂಜಲಿ ಎಂದರು. ನನ್ನಿಂದ ಹಾಗೂ ಕರ್ನಾಟಕ ಸರ್ಕಾರದಿಂದ ಏನು ಸಹಾಯ ಸಹಕಾರ ವಾಗಬೇಕು ಅದನ್ನು ಖಂಡಿತವಾಗಿಯೂ ಮಾಡಿ ಕೊಡೋಣ ಎಂದು ಹೇಳಿದರು.

Tags:

error: Content is protected !!