Belagavi

ಮೃತಪಟ್ಟ ಕುರಿಗಳಿಗೆ ಪರಿಹಾರ ಪುನರಾರಂಭಿಸಲು ಆಗ್ರಹಿಸಿ ಕುರಿಗಾರರಿಂದ ಪ್ರತಿಭಟನೆ

Share

ಮೃತಪಟ್ಟ ಕುರಿಗಳಿಗೆ ನೀಡುತ್ತಿದ್ದ 5 ಸಾವಿರ ರೂ. ಪರಿಹಾರವನ್ನು ಹಿಂದಕ್ಕೆ ಪಡೆದ ಸರ್ಕಾರದ ಕ್ರಮ ಖಂಡಿಸಿ ಕುರಿ ಮಹಾಮಂಡಳದ ನೇತೃತ್ವದಲ್ಲಿ ನೂರಾರು ಕುರಿಗಾರರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮೃತಪಟ್ಟ ಕುರಿಗಳಿಗೆ ನೀಡುತ್ತಿದ್ದ 5 ಸಾವಿರ ರೂ ಪರಿಹಾರಧನವನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ. ಕೂಡಲೇ ಮೃತ ಕುರಿಗಳಿಗೆ ನೀಡುತ್ತಿದ್ದ 5 ಸಾವಿರ ರೂ. ಪರಿಹಾರಧನವನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿ ಕುರಿ ಮಹಾಮಂಡಳದ ನೇತೃತ್ವದಲ್ಲಿ ನೂರಾರು ಕುರಿಗಾರರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಕುರಿ ಮಹಾಮಂಡಳದ ಅಧ್ಯಕ್ಷ ಪಂಡಿತರಾವ್ ಚಿದ್ರಿ ಮಾತನಾಡಿ, ಸರ್ಕಾರ ಮೃತ ಕುರಿಗಳಿಗೆ ನೀಡುತ್ತಿದ್ದ 5 ಸಾವಿರ ರೂ. ಪರಿಹಾರಧನವನ್ನು ನಿಲ್ಲಿಸಿ ಕುರಿಗಾಹಿಗಳಿಗೆ ಅನ್ಯಾಯ ಮಾಡುತ್ತಿದೆ. ಕೂಡಲೇ ಪರಿಹಾರ ಧನ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕುರಿಗಾಹಿಗಳು ಬೆಂಗಳೂರು ಚಲೋ ಕಾರ್ಯಕ್ರಮ ನಡೆಸುವುದು ನಿಶ್ಚಿತ ಎಂದರು.

ಈ ವೇಳೆ ಕುರಿ ಮಹಾಮಂಡಳದ ಪದಾಧಿಕಾರಿಗಳು, ಕುರಿಗಾರರ ಸಂಘಟನೆಯವರು ಪಾಲ್ಗೊಂಡಿದ್ದರು.

Tags:

error: Content is protected !!