ಅಕಾಲಿಕ ಮಳೆಯಿಂದ ಮಾವಿನ ಬೆಳೆಯಲ್ಲಿ ಉಂಟಾಗುವ ರೋಗ ಬಾಧೆಗಳನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳು ಇಲ್ಲಿವೆ ನೋಡಿ.
ಬೆಳಗಾವಿ: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಒಟ್ಟು 4472 ಹೆಕ್ಟೇರ್ ಪ್ರದೇಶ ಮಾವು ಇದ್ದು, ಪ್ರಸಕ್ತ ಮಾವು ಹೂವು ಬಿಡುವ ಸಮಯದಲ್ಲಿ ಅಕಾಲಿಕ ಮಳೆ ಬಿದ್ದಿರುವ ಕಾರಣ ಸಂಭವನೀಯ ಹೂವುತೆನೆ ಕಪ್ಪಾಗುವ ರೋಗ ಹಾಗೂ ಬೂದು ರೋಗವನ್ನು ತಡೆಗಟ್ಟಲು ಹೆಕ್ಸಾಕೊನಾಜೊಲ್ 2 ಮಿ.ಲೀ ಅಥವಾ ಮಿಥೈಲ್ ಥಯೋಫಿನೈಟ್ 1 ಗ್ರಾಂ ಅಥವಾ ಕಾರ್ಬನ್‍ಡೈಜಿಮ್ 1 ಗ್ರಾಂ ಮತ್ತು ಹೂ ಮತ್ತು ಮಿಡಿಕಾಯಿ ಉದುರುವುದನ್ನು ನಿಯಂತ್ರಿಸಲು 0.50 ಮಿ.ಲೀ ಪ್ಲಾನೋಪಿಕ್ಸನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಿಸುವುದು ಎಂದು ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.