COVID-19

ಮಾನವ ಕುಲ ಉಳಿಸಲು..ದೇಶಿ ಎರಡು ಲಸಿಕೆ ಸಿದ್ಧ..ಪ್ರಧಾನಿ ಮೋದಿ

Share

ಭಾರತ ಹೊರಗಡೆಯಿಂದ ಪಿಪಿಇ ಕಿಟ್ಸ್, ವೆಂಟಿಲೇಟರ್ಸ್ ಮತ್ತು ಮಾಸ್ಕ್‍ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಇಂದು ದೇಶ ಸ್ವಾವಲಂಬಿಯಾಗಿದೆ. ಮೇಡ್ ಇನ್ ಇಂಡಿಯಾದ ಎರಡು ಲಸಿಕೆಗಳು ಮಾನವ ಕುಲವನ್ನು ರಕ್ಷಿಸಲು ಸಿದ್ಧವಾಗಿವೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

16ನೇ ಪ್ರವಾಸಿ ಭಾರತೀಯ ದಿವಸ ಸಮ್ಮೇಳನವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಮಾತನಾಡಿದರು. ಭಯೋತ್ಪಾದನೆ ವಿರುದ್ಧ ಭಾರತ ಎದ್ದು ನಿಂತಾಗಲೇ ವಿಶ್ವಕ್ಕೂ ಸಹ ಸವಾಲು ಎದುರಿಸುವ ಧೈರ್ಯ ಬಂದಿತು. ಇಂದು ಭಾರತ ಭ್ರμÁ್ಟಚಾರವನ್ನು ಹೋಗಲಾಡಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಫಲಾನುಭವಿಗಳ ಖಾತೆಗೆ ಲಕ್ಷಾಂತರ ಮತ್ತು ಕೋಟ್ಯಾಂತರ ರೂಪಾಯಿ ನೇರವಾಗಿ ಜಮೆಯಾಗುತ್ತಿದೆ ಎಂದು ಹೇಳಿದರು.

ಭಾರತದಲ್ಲಿ ಸದ್ಯ ನಡೆಯುತ್ತಿರುವ ಬಡವರ ಸಬಲೀಕರಣದ ಬಗ್ಗೆ ವಿಶ್ವವೇ ಚರ್ಚಿಸುತ್ತಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ, ಅಭಿವೃದ್ಧಿ ಹೊಂದುತ್ತಿರುವ ದೇಶವೂ ಮುನ್ನಡೆ ಸಾಧಿಸಬಹುದು ಎಂದು ನಾವು ತೋರಿಸಿದ್ದೇವೆ ಎಂದು ಮೋದಿ ತಿಳಿಸಿದರು.

 

Tags:

error: Content is protected !!