ಆಯುರ್ವೇದ ಚಿಕಿತ್ಸಾಲಯಗಳ ಪ್ರಮುಖ ಮಾಧವ್‍ಬಾಗ್ ವೈದ್ಯ ಸಾನೆ ಟ್ರಸ್ಟ್, ರೋಟರಿ ಕ್ಲಬ್ ಆಫ್ ಬೆಳಗಾವಿ ಸಹಯೋಗದೊಂದಿಗೆ ಮಹತ್ವಾಕಾಂಕ್ಷೆಯ ಹೃದಯ ಕಾಯಿಲೆ ಮುಕ್ತ ಕರ್ನಾಟಕ ಯೋಜನೆಯನ್ನು ವಿಧ್ಯುಕ್ತವಾಗಿ ಆರಂಭಿಸಿತು. ಬೆಳಗಾವಿ ಕಿಲ್ಲಾ ಕೆರೆ ಬಳಿ ಇರುವ ಪೈ ರೆಸಾರ್ಟ್‍ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಆರೋಗ್ಯಂ ಹೃದಯ ಸಂಪದ ಯೋಜನೆ ಉದ್ಘಾಟನೆಗೊಂಡಿತು.
ಕರ್ನಾಟಕದಲ್ಲಿ ಮಧುಮೇಹ, ಹೃದ್ರೋಗ, ಅಧಿಕ ರಕ್ತದೊತ್ತಡ ಇರುವ ಜನರ ಪ್ರಮಾಣ ಹೆಚ್ಚುತ್ತಲೇ ಇದೆ. ಮಾಧವ್‍ಬಾಗ್ ಕಳೆದ 15 ವರ್ಷಗಳಿಂದ ಆಯುರ್ವೇದದ ಮೂಲಕ ಹೃದ್ರೋಗ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಮಾನಸಿಕ ಒತ್ತಡಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡುತ್ತಿದೆ.
2021 ರಲ್ಲಿ ಕನಿಷ್ಠ 1000 ರೋಗಿಗಳನ್ನು ಗುಣಪಡಿಸುವ ಗುರಿಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಮಾಧವ್‍ಬಾಗ್ ವೈದ್ಯ ಸಾನೆ ಟ್ರಸ್ಟ್, ರೋಟರಿ ಕ್ಲಬ್ ಆಫ್ ಬೆಳಗಾವಿ ಸಹಯೋಗದೊಂದಿಗೆ ಮಹತ್ವಾಕಾಂಕ್ಷೆಯ ಹೃದಯ ಕಾಯಿಲೆ ಮುಕ್ತ ಕರ್ನಾಟಕ ಯೋಜನೆಯನ್ನು ವಿಧ್ಯುಕ್ತವಾಗಿ ಆರಂಭಿಸಿತು. ಬೆಳಗಾವಿ ಕಿಲ್ಲಾ ಕೆರೆ ಬಳಿ ಇರುವ ಪೈ ರೆಸಾರ್ಟ್‍ನಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಸಮಾರಂಭದಲ್ಲಿ ಆರೋಗ್ಯಂ ಹೃದಯ ಸಂಪದ ಯೋಜನೆ ಉದ್ಘಾಟನೆಗೊಂಡಿತು.
ಈ ವೇಳೆ ರೋಟರಿ ಉಪ ಗವರ್ನರ್ ಡಾ.ಮನೋಜ್ ಸುತಾರ್, ರೋಟರಿ ಕ್ಲಬ್ ದರ್ಪಣ ಅಧ್ಯಕ್ಷ ಶೀತಲ್ ಚಿಲಮಿ, ಮಾಧವ್‍ಬಾಗ್‍ನ ಹಿರಿಯ ವಿಭಾಗೀಯ ವ್ಯವಸ್ಥಾಪಕ, ಸಿಎಸ್‍ಆರ್ ಮುಖ್ಯಸ್ಥ ಡಾ.ಪ್ರಸಾದ್ ದೇಶಪಾಂಡೆ, ರಾಜ್ಯ ಶಿಕ್ಷಕರ ಸಂಘದ ವಿಜಯ ಕುಚನೂರೆ, ಉದ್ಯಮಿ ರಮೇಶ ಲದ್ದಡ, ಹೃದಯರೋಗ ತಜ್ಞ ಡಾ.ಬಸವರಾಜ ಮಹಾಂತಶೆಟ್ಟಿ ಮತ್ತಿತರರು ಇದ್ದರು.