Chikkodi

ಮಾಂಜರಿ ಗ್ರಾಮದಲ್ಲಿ ಪ್ಲೆಕ್ಸಗಳು ಮರಾಠಿಮಯ ಕನ್ನಡಿಗರ ಆಕ್ರೋಶ…

Share

ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಪ್ಲೆಕ್ಸ್‍ಗಳು ಮರಾಠಿಮಯವಾಗಿವೆ. ಇದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ಕೂಡಲೇ ಮರಾಠಿ ಫ್ಲೆಕ್ಸ್‍ಗಳನ್ನು ತೆರವು ಗೊಳಿಸುವಂತೆ ಕನ್ನಡಿಗರು ಆಗ್ರಹಿಸಿದ್ದಾರೆ.

ಹೌದು ಅಂದಹಾಗೆ ಇದು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮ. ಇತ್ತೀಚಿಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಿಗೆ ಶುಭಾಶಯಗಳನ್ನು ಕೋರುವ ಉದ್ದೇಶದಿಂದ ಮಾಂಜರಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಫ್ಲೆಕ್ಸ್‍ಗಳನ್ನು ಹಾಕಲಾಗಿದೆ. ಆದರೆ ಎಲ್ಲಾ ಪ್ಲೆಕ್ಸಗಳು ಮರಾಠಿ ಭಾಷೆ ಯಲ್ಲಿವೆ. ಇದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ಮಾಂಜರಿ ಗ್ರಾಮದ ಕೆಲ ರಾಜಕೀಯ ಪುಂಡರು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಕನ್ನಡ ಭಾಷೆ ಯನ್ನು ಮರೆತು ಮರಾಠಿ ಭಾಷೆ ಯಲ್ಲಿ ಫ್ಲೆಕ್ಸಗಳನ್ನು ಹಾಕಿದ್ದಾರೆ.

ಇದು ಮಾಂಜರಿ ಗ್ರಾಮದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇಲ್ಲಿ ಕನ್ನಡಿಗರು ಮರಾಠಿಗರು ಅಣ್ಣ-ತಮ್ಮಂದಿರಂತೆ ಬದುಕುತ್ತಿರುವ ಈ ಗ್ರಾಮದಲ್ಲಿ ಮರಾಠಿ ಭಾಷೆ ಯ ಫ್ಲೆಕ್ಸಗಳನ್ನು ಹಾಕುವ ಮುಖಾಂತರ ಭಾಷೆ ಭಾಷೆ ಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಮಾಡಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರ ಶ್ರೀಕಾಂತ ಅಸೂದೆಯವರು ಮಾತನಾಡಿ ಮಾಂಜರಿ ಗ್ರಾಮದಲ್ಲಿ ಕೆಲ ರಾಜಕೀಯ ಪುಂಡರು ತಮ್ಮ ಸ್ವಾರ್ಥಕ್ಕೋಸ್ಕರ ಮರಾಠಿ ಭಾಷೆ ಯಲ್ಲಿ ಫ್ಲೆಕ್ಸಗಳನ್ನು ಹಾಕಿದ್ದಾರೆ. ಇವರಿಗೆ ಕನ್ನಡ ಭಾಷೆ ಯ ಬಗ್ಗೆ ಪ್ರೀತಿ ಇಲ್ಲ. ಇವರು ಕನ್ನಡ ಮತ್ತು ಮರಾಠಿ ಭಾಷಿಕರ ಮಧ್ಯೆ ಬೆಂಕಿಯನ್ನು ಹಚ್ಚುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಹಾಗೂ ಗ್ರಾಮದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಹುನ್ನಾರ ನಡೆದಿದೆ ಎಂದು ಕನ್ನಡಪರ ಹೋರಾಟಗಾರ ಶ್ರೀಕಾಂತ ಅಸೂದೆಯವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಒಟ್ಟಿನಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಅಣ್ಣತಮ್ಮಂದಿರು ಹಾಗೆ ಇರುವ ಈ ಮಾಂಜರಿ ಗ್ರಾಮದಲ್ಲಿ ಕೆಲ ರಾಜಕೀಯ ನಾಯಕರು ಮರಾಠಿ ಭಾಷೆ ಪ್ರೇಮವು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.

Tags:

error: Content is protected !!