Uncategorized

ಮಾಂಜರಿಯಲ್ಲಿ ರೈತ ಆತ್ಮಹತ್ಯೆ ಪರಿಹಾರ ಚೆಕ್ ವಿತರಣೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿಯವರಿಂದ ಚಾಲನೆ

Share

 

ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಾಂಜರಿ ಗ್ರಾಮದಲ್ಲಿ ರೈತ ಆತ್ಮಹತ್ಯೆ ಪರಿಹಾರ ಚೆಕ್ ವಿತರಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗಣೇಶ ಹುಕ್ಕೇರಿ ಅವರು ಚಾಲನೆ ನೀಡಿದರು.

ಮಾಂಜರಿ ಗ್ರಾಮದ ಅಬ್ಬಾಸ್ ಮುಲ್ಲಾ ಎನ್ನುವ ರೈತ ಇತ್ತೀಚಿಗೆ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು.ಈ ಹಿನ್ನೆಲೆಯಲ್ಲಿ ಇವತ್ತು ಶಾಸಕ ಗಣೇಶ ಹುಕ್ಕೇರಿಯವರು ಅಬ್ಬಾಸಯವರ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಮಂಜೂರಾದ ಸುಮಾರು .5 ಲಕ್ಷರೂಪರಿಹಾರವನ್ನು ಚೆಕ್ಕನ್ನು ಶಾಸಕ ಗಣೇಶ ಹುಕ್ಕೆರಿಯವರು ಅಬ್ಬಾಸ್ ಮುಲ್ಲಾ ಅವರ ಕುಟುಂಬಸ್ಥರಿಗೆ ನೀಡಿದರು. ಪರಿಹಾರದ ಹಣದಿಂದ ಒಳ್ಳೆಯ ಸುಂದರವಾದ ಬದುಕನ್ನು ಕಟ್ಟಿಕೊಂಡು ಜೀವನವನ್ನು ಸಾಗಿಸುವಂತೆ ಕುಟುಂಬ ಸದಸ್ಯರಿಗೆ ಮನವಿಯನ್ನು ಮಾಡಿಕೋಂಡರು.ಹಾಗೂ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಂಜರಿ ಗ್ರಾಮದ ಕೃಷ್ಣಾ ನದಿಗಳ ಘಾಟಗಳ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಹಾಗೂ ಮಾಂಜರಿ ಗ್ರಾಮದ ವಾರ್ಡ್ ನಂಬರ್ 2 ರಲ್ಲಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿ ಅವರು ಚಾಲನೆ ನೀಡಿದರು. ನಂತರ ಇನ್ ನ್ಯೂಸ್ ಜೊತೆ ಮಾತನಾಡಿದ ಹುಕ್ಕೇರಿಯವರು ಮಾಂಜರಿ ಗ್ರಾಮದಲ್ಲಿ ಬಹುದಿನಗಳ ಬೇಡಿಕೆಯಾದ ಘಾಟಗಳ ತಡೆಗೋಡೆ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಇವತ್ತು ಚಾಲನೆಯನ್ನು ನೀಡಿದ್ದೇವೆ. ಹಾಗೂ ಸಾಲಬಾಧೆ ತಾಳಲಾರದೆ ರೈತರು ಆತ್ಮಹತ್ಯೆಯನ್ನು ಮಾಡಿಕೊಳ್ಳಬಾರದು ರೈತರಿಗೆ ಎಂಥ ಕಠಿಣ ಪರಿಸ್ಥಿತಿ ಇದ್ದರೂ ಕೂಡ ಯಾವತ್ತೂ ನಾನು ಶಾಸಕನಾಗಿ ರೈತರ ಕಷ್ಟಗಳಿಗೆ ಸ್ಪಂದಿಸುವಂತಹ ಕೆಲಸಗಳನ್ನು ಮಾಡುತ್ತೇನೆ ಎಂದು ಶಾಸಕ ಗಣೇಶ ಹುಕ್ಕೇರಿ ಯವರು ರೈತರಲ್ಲಿ ಭರವಸೆ ಮೂಡಿಸಿದರು.ನಂತರ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹಾಗೂ ಕಾಂಗ್ರೆಸ್ ಮುಖಂಡರಾದ ಪಾಂಡುರಂಗ ಮಾನೆಯವರು ಮಾತನಾಡಿ ಗಣೇಶ ಹುಕ್ಕೇರಿಯವರ ಸತತ ಪ್ರಯತ್ನದಿಂದ ಅಬ್ಬಾಸ್ ಅವರ ಕುಟುಂಬಕ್ಕೆ 5ಲಕ್ಷ ರೂಪಾಯಿ ಪರಿಹಾರ ಧನ ನೀಡಿದ್ದೇವೆ. ಇದಕ್ಕಾಗಿ ಶಾಸಕ ಗಣೇಶ ಹುಕ್ಕೇರಿಯವರು ಬಹಳಷ್ಟು ಪ್ರಯತ್ನವನ್ನು ಮಾಡಿದಾರೆ. ಅವರು ಮಾಂಜರಿ ಗ್ರಾಮದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಮಾಂಜರಿ ಗ್ರಾಮಸ್ಥರು ಯಾವತ್ತು ಶಾಸಕ ಗಣೇಶ ಹುಕ್ಕೇರಿಯವರಿಗೆ ಚಿರಋಣಿಯಾಗಿರುತ್ತೇನೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪಾಂಡುರಂಗ ಮಾನೆ ಹೇಳಿದರು.

 

ಈ ಸಂಧರ್ಭದಲ್ಲಿ ಸುಭಾಷ ನರವಾಡೆ,ಬಸಗೌಡ ಪಾಟೀಲ, ಅಪ್ಪಾ ಮುಲ್ಲಾ,ಚಿದಾನಂದ ಪೂಜೆರಿ,ಸುಭಾಷ ತೋರಸೆ,ಪೋಪಟ ಲಾಮಖಾನೆ,ಪ್ರೆಮಚಂದ್ರ ಶೆಟ್ಟಿ,ಬಾಬಾಸಾಹೇಬ ಲೋಕರೆ,ಅಶೋಕ ಹವಲೆ ಯುವರಾಜ ಘಾಟಕೆ,ನಿತಿನ ಮಾಯನ್ನವರ,ಗುತ್ತಿಗೆದಾರ ಗುಲಾಬ ಹುಸೇನ ಬಾಗವಾನ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು ‌.‌

Tags:

error: Content is protected !!