ಬೆಳಗಾವಿ ನಮ್ಮದಂದು ಹೇಳಿಕೆ ನೀಡಿದ ಮಹಾರಾಷ್ಟ್ರದ ಸಿಎಂ ಉದ್ಧವ ಠಾಕ್ರೆ ವಿರುದ್ಧ ಗುಮ್ಮಟ ನಗರಿಯಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ನವ ನಿರ್ಮಾಣ ವೇದಿಕೆ ಕಾರ್ಯಕರ್ತರು ಜಂಟಿ ಪ್ರತಿಭಟನೆ ನಡೆಸಿ ಮಹಾರಾಷ್ಟ್ರ ಸಿಎಂ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಭಾರತೀಯ ಒಕ್ಕೂಟದ ವ್ಯವಸ್ಥೆಗೆ ವಿರುದ್ದವಾದ ನಿಲುವು ತಳೆದಿರುವ ಮಹಾರಾಷ್ಟ್ರ ಸಿಎಂ ಠಾಕ್ರೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಿಗರು ಒಂದಿಂಚೂ ಜಾಗೆ ಕೊಡುವುದಿಲ್ಲ. ಕರ್ನಾಟಕ ಯಾರಪ್ಪಂದು ಕನ್ನಡಿಗರಪ್ಪಂದು ಎಂದು ಘೋಷಣೆ ಕೂಗಿದರು. ಠಾಕ್ರೆ ಒಬ್ಬ ಭಾರತೀಯ ನಾಗಿ ಒಕ್ಕೂಟದ ತತ್ವನ್ನು ಗೌರವಿಸುವ ಬದ್ಧತೆಯನ್ನು ಠಾಕ್ರೆ ತೊರಿಸಲಿ, ಮಹಾಜನ್ ಆಯೋಗದ ವರದಿ ಜಾರಿಯಾಗಬೇಕು. ರಾಷ್ಟ್ರಪತಿ ಗಳು ಸಿಎಂ ಠಾಕ್ರೆ ಮೇಲೆ ಕ್ರಮ ಕೈಗೊಂಡು ಕನ್ನಡಿಗರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಶೇಷರಾವ ಮಾನೆ, ರಾಜಕುಮಾರ ವಾಗ್ಮಡಿ, ಗುರುರಾಜ ಪಂಚಾಳ, ವಸಂತರಾವ ಕೊರತಿ ಸೇರಿದಂತೆ ಹಲವು ಕಾರ್ಯಕರ್ತರ ಉಪಸ್ಥಿತರಿದ್ದರು…