Vijaypura

ಮರಾಠಾ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಿಸುವಂತೆ ಚಿತ್ರನಟ ಕೆ.ಗಣೇಶರಾವ್ ಕೇಸರ್ ಕರ ಸರಕಾರಕ್ಕೆ ಮನವಿ

Share

ಇತ್ತಿಚೆಗೆ ರಾಜ್ಯ ಸರಕಾರವು ಸ್ಥಾಪಿಸಿರುವ ಮರಾಠಾ ಅಭಿವೃದ್ಧಿ ನಿಗಮಕ್ಕೆ ತಮ್ಮನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಚಿತ್ರನಟ, ಕೆ.ಗಣೇಶರಾವ್ ಕೇಸರಕರ್ ಸರಕಾರಕ್ಕೆ ಮನವಿ ಮಾಡಿಕೊಂಡರು.

ವಿಜಯಪುರ ದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿ ತಾವು ಕಳೆದ ೨೨ ವರ್ಷಗಳಿಂದಲೂ ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದುಕೊಂಡಿದ್ದೇನೆ. ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿದ್ದೆನೆ ಅಲ್ಲದೇ ಪಕ್ಷವು ವಹಿಸಿದ ಕಾರ್ಯವನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿಭಾಯಿಸುತ್ತಿದ್ದೇನೆ.

ಪ್ರಸ್ತುತ ಬೆಂಗಳೂರು ನಗರ ಕಲಾ ಮತ್ತು ಸಾಂಸ್ಕೃತಿಕ ಕೋಷ್ಠಕದ ಸಂಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದೆನೆ. ತಾವು ಚಿತ್ರನಟರಾಗಿರೊದ್ರಿಂದ ಜನರಿಗೆ ಹತ್ತಿರವಾಗಿದ್ದು ಜನರ ಸಂಪರ್ಕದಲ್ಲಿ ಇರೊದ್ರಿಂದ ತಮ್ಮನ್ನು ನೇಮಕ ಮಾಡಿದರೆ ಮರಾಠಾ ಸಮುದಾಯದ ಅಭಿವೃದ್ಧಿ ಗೆ ಸಹಕಾರಿ ಯಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವೀರ ಶಿವಾಜಿ ಸೇನೆಯ ರಾಜ್ಯ ಅಧ್ಯಕ್ಷ ಕಮಲೇಶರಾವ್ ಪಡತಾರೆ, ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಜಾಧವ, ರಾಜ್ಯ ಕಾರ್ಯದರ್ಶಿ ಸದಾಶಿವ ಚವ್ಹಾಣ, ವಿಜಯಪುರ ಬಿಜೆಪಿ ಮುಖಂಡ ಡಾ.ಸುರೇಶ ಬಿರಾದಾರ ಉಪಸ್ಥಿತರಿದ್ದರು…

Tags:

error: Content is protected !!