ಬೆಳಗಾವಿ ಉದ್ಯಮಬಾಗ್ ಪೊಲೀಸರು ಮಟಕಾ ಅಡ್ಡೆಯ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಮಟಕಾ ಆಟದಲ್ಲಿ ತೊಡಗಿಸಿದ್ದ 6,890 ರೂ ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಪಾರ್ವತಿ ನಗರದ ಚಂದ್ರಹಾಸ್ ರಾಘು ಪೂಜಾರಿ,ಅನಗೋಳದ ರಂಜಾನ್ ಶೌಖತ್ ಮೊಪದಾರ್ ಎಂದು ಗುರುತಿಸಲಾಗಿದೆ. ಉದ್ಯಮಬಾಗ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.