Chikkodi

ಮಗಳಿಗೆ ಕನ್ನಡತಿ ಹೆಸರು ನಾಮಕರಣ.. ಕನ್ನಡ ಭಾಷಾ ಪ್ರೇಮ ಮೆರೆದ ಚಿಕ್ಕೋಡಿಯ ದಂಪತಿಗಳು

Share

ಆ ದಂಪತಿಗಳು ಅಪ್ಪಟ ಕನ್ನಡ ಅಭಿಮಾನಿಗಳು ಕನ್ನಡ ಭಾಷೆಯೆಂದರೆ ಇವರಿಗೆ ಅಪರೂಪದ ಪ್ರೀತಿ ಭಾಷಾಭಿಮಾನ ಹಾಗೂ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡತಿ ಎಂಬ ಧಾರಾವಾಹಿ ಅಭಿಮಾನಕ್ಕೆ ಒಳಗಾಗಿ ಮಗಳಿಗೆ ಕನ್ನಡತಿ ಎಂದು ಹೆಸರನ್ನು ನಾಮಕರಣ ಮಾಡಿ ಕನ್ನಡ ಭಾಷಾಭಿಮಾನವನ್ನು ಮೆರೆದಿದ್ದಾರೆ ಅಷ್ಟಕ್ಕೂ ಆ ದಂಪತಿಗಳು ಯಾರು ಅಂತೀರಾ ಹಾಗಾದರೆ ಈ ಸ್ಟೋರಿಯನ್ನು ನೋಡಿ…

ಮಗುವಿಗೆ ಕನ್ನಡತಿ ಎಂದು ಹೆಸರನ್ನು ನಾಮಕರಣ ಮಾಡಿದ ನಾದಬ್ರಹ್ಮ ಹಂಸಲೇಖ… ಬೃಹತ್ ವೇದಿಕೆಯಲ್ಲಿ ಕುಣಿದು ಕುಪ್ಪಳಸುತ್ತಿರುವ ಕಿರುತೆರೆಯ ತಾರೆಯರು.. ಹೌದು ಚಿಕ್ಕೋಡಿ ಪಟ್ಟಣದ ಸಿದಗೌಡ ಪಾಟೀಲ ಅಶ್ವಿನಿ ಪಾಟೀಲ ದಂಪತಿಗಳಿಗೆ ಇತ್ತೀಚಿಗೆ ಹೆಣ್ಣು ಮಗು ಜನಿಸಿದೆ. ಈ ದಂಪತಿಗಳು ಅಪ್ಪಟ ಕನ್ನಡ ಅಭಿಮಾನಿಗಳು ಇರುವುದರಿಂದ ತಮ್ಮ ಮಗಳಿಗೆ ‘ಕನ್ನಡದ ವೃದ್ಧಿ ‘ಎಂದು ಹೆಸರನ್ನು ನಾಮಕರಣವನ್ನು ಮಾಡಿದ್ದಾರೆ. ಬೆಂಗಳೂರಿನಲ್ಲಿ ಬೃಹತ್ ವೇದಿಕೆಯಲ್ಲಿ ನಾದಬ್ರಹ್ಮ ಸಂಗೀತ ಮಾಂತ್ರಿಕ ಹಂಸಲೇಖಯವರು ಈ ಮಗುವಿಗೆ ಕನ್ನಡದ ವೃದ್ಧಿ ಎಂದು ಹೆಸರನ್ನು ನಾಮಕರಣ ಮಾಡಿದ್ದಾರೆ. ಸಿದಗೌಡ ಪಾಟೀಲ ಅವರು ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು ,ಕನ್ನಡ ಭಾಷೆಯ ಮೇಲೆ ಅಪಾರವಾದ ಪ್ರೀತಿಯಿಂದ ಅವರಿಗೆ ಜನಿಸುವ ಮಗುವಿಗೆ ಕನ್ನಡವೆಂದು ಹೆಸರನ್ನು ನಾಮಕರಣ ಮಾಡಬೇಕು ಎಂದು ನಿರ್ಧರಿಸಿದ್ದರು. ಈ ಕಾರಣಕ್ಕಾಗಿಯೇ ತಮ್ಮ ಮಗಳಿಗೆ ಕನ್ನಡದ ವೃದ್ಧಿ ಎಂದು ಹೆಸರನ್ನು ನಾಮಕರಣ ಮಾಡಿದ್ದಾರೆ.

ಇನ್ನೂ ಸಿದಗೌಡ ಪಾಟೀಲ ಅವರು ಧರ್ಮ ಪತ್ನಿಯಾದ ಅಶ್ವಿನಿ ಪಾಟೀಲಯವರು ಸಹ ಕನ್ನಡ ಅಭಿಮಾನಿವಾಗಿದ್ದು. ಹಾಗೂ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡತಿ ಎಂಬ ಧಾರಾವಾಹಿ ಅಭಿಮಾನಕ್ಕೆ ಒಳಗಾಗಿ ತಮ್ಮ ಮಗಳಿಗೆ ಕನ್ನಡದ ವೃದ್ಧಿ ಎಂದು ಹೆಸರನ್ನು ನಾಮಕರಣ ಮಾಡಲು ಇಚ್ಛಿಸಿದರು.ಹೀಗಾಗಿ ತಮ್ಮ ಮಗಳಿಗೆ ಕನ್ನಡದ ವೃದ್ಧಿ ಎಂದು ಹೆಸರನ್ನು ನಾಮಕರಣ ಮಾಡಿದ್ದಾರೆ.

ಒಟ್ಟಿನಲ್ಲಿ ಕನ್ನಡ ಭಾಷೆಯ ಮೇಲೆ ಅಪಾರವಾದ ಪ್ರೀತಿಯಿಂದ ತಮ್ಮ ದಾಂಪತ್ಯ ಜೀವನ ಸಹ ಕನ್ನಡಮಯ ವಾಗಿರಲಿ ಎಂದು ತಮ್ಮ ಮಗಳಿಗೆ ಕನ್ನಡದ ವೃದ್ಧಿ ಹೆಸರನ್ನು ನಾಮಕರಣ ಮಾಡುವ ಮೂಲಕ ಪಾಟೀಲ ದಂಪತಿಗಳ ಕನ್ನಡ ಭಾಷಾಭಿಮಾನಕ್ಕೆ ಒಂದು ಸೆಲ್ಯೂಟ್ ಹೇಳಲೇಬೇಕು.

Tags:

error: Content is protected !!