Chikkodi

ಮಕರ ಸಂಕ್ರಾಂತಿ ಹಿನ್ನೆಲೆ ಸಹಸ್ರಾರು ಭಕ್ತರೊಂದಿಗೆ ಶ್ರೀಶೈಲ್ ಜದ್ಗುರುಗಳಿಂದ ಸಂಕ್ರಮಣ ಸ್ನಾನ

Share

ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಶ್ರೀಶೈಲ್ ಜದ್ಗುರುಗಳು ಸಹಸ್ರಾರು ಭಕ್ತರೊಂದಿಗೆ ಕೃಷ್ಣಾ ನದಿಯಲ್ಲಿ ಸಂಕ್ರಮಣ ಸ್ನಾನ ಮಾಡಿದರು.

ಮಕರ ಸಂಕ್ರಾಂತಿಯ ದಿನ ಸೂರ್ಯ ದಕ್ಷಿಣಾಯನದಿಂದ ಉತ್ತರಾಯನಕ್ಕೆ ತನ್ನ ಪಥವನ್ನು ಬದಲಿಸುವ ಸಮಯದಲ್ಲಿ ಚಿಕ್ಕೋಡಿ ತಾಲೂಕಿನ ಯಡೂರ-ಕಲ್ಲೋಳ ಕೃಷ್ಣಾನದಿಯಲ್ಲಿ ಶ್ರೀಶೈಲ್ ಜದ್ಗುರುಗಳು ಉತ್ತರಾಭಿಮುಖವಾಗಿ ಸಹಸ್ರಾರು ಭಕ್ತರೊಂದಿಗೆ ಸಂಕ್ರಮ ಸ್ನಾನವನ್ನು ಮಾಡಿದರು. ಮಕರ ಸಂಕ್ರಾಂತಿ ದಿನದಂದು ಸೂರ್ಯ ತನ್ನ ಪಥವನ್ನು ಬದಲಿಸುವ ಸಮಯದಲ್ಲಿ ನದಿಯಲ್ಲಿ ಸ್ನಾನ ಮಾಡಿದರೆ ಮನುಷ್ಯನ ಜೀವನದಲ್ಲಿ ಆರೋಗ್ಯ, ಸಂತೋಷ, ಸಮೃಧಿ,ಸುಖ ಶಾಂತಿ ಕರುಣಿಸುತ್ತೆ ಎಂಬ ಪ್ರತಿಕದೊಂದಿಗೆ ಸಹಸ್ರಾರು ಭಕ್ತರು ಕೃಷ್ಣಾ ನದಿಯಲ್ಲಿ ಶ್ರೀಶೈಲ್ ಜದ್ಗುರುಗಳ ಸಮೇತ ಸ್ನಾನವನ್ನು ಮಾಡಿದರು. ಭಕ್ತರು ಶ್ರೀಶೈಲ್ ಜದ್ಗುರುಗಳಿಗೆ ಭಕ್ತಿಪೂರ್ವಕವಾಗಿ ನೀರು ಎರೆಯುವ ಮೂಲಕ ಸ್ನಾನವನ್ನು ಮಾಡಿಸಿದರು.

ಒಟ್ಟಿನಲ್ಲಿ ಮಕರ ಸಂಕ್ರಾಂತಿ ದಿನದಂದು ನದಿಯಲ್ಲಿ ಶ್ರೀಶೈಲ್ ಜದ್ಗುರುಗಳು ಭಕ್ತರ ಜೊತೆ ಸ್ನಾನವನ್ನು ಮಾಡಿ ಭಕ್ತರ ಜೀವನವನ್ನು ಸಾಕಾರಗೊಳಿಸಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು ಭಕ್ತರು ಉಪಸ್ಥಿತರಿದ್ದರು.

Tags:

error: Content is protected !!