Belagavi

ಭೂತರಾಮನಹಟ್ಟಿ ಝೂಗೆ ಅರಣ್ಯ ಇಲಾಖೆ ಮುಖ್ಯಸ್ಥ ಸಂಜಯ ಮೋಹನ ಭೇಟಿ

Share

ಬೆಳಗಾವಿಯ ಭೂತರಾಮನಹಟ್ಟಿ ರಾಣಿ ಚನ್ನಮ್ಮ “ಝೂ”ಗೆ ಅರಣ್ಯ ಇಲಾಖೆ ಮುಖ್ಯಸ್ಥ ಪಿಸಿಸಿಎಫ್ ಸಂಜಯ ಮೋಹನ ಇಂದು ಭೇಟಿ ನೀಡಿ ಹುಲಿ ಮತ್ತು ಇತರ ವನ್ಯಪ್ರಾಣಿಗಳನ್ನು ಬಿಡುವ ಕುರಿತು ಅಂತಿಮ ವ್ಯವಸ್ಥೆ ಪರಿಶೀಲಿಸಿದರು.

ಹುಲಿ, ಸಿಂಹ, ಚಿರತೆ, ಕರಡಿ ಹಾಗೂ ನರಿಗಳನ್ನು ಇಡಲು ಮಾಡಿರುವ ಹೋಲ್ಡಿಂಗ್ ರೂಮು ಮತ್ತು ಅವುಗಳ ವಾಸಕ್ಕೆ ಯೋಗ್ಯ ವಾತಾವಣ ನಿರ್ಮಿಸಿದ್ದನ್ನು ಕಂಡು ಇಲ್ಲಿನ ಸಿಬ್ಬಂದಿಗೆ ಅರಣ್ಯ ಇಲಾಖೆ ಮುಖ್ಯಸ್ಥ ಪಿಸಿಸಿಎಫ್ ಸಂಜಯ ಮೋಹನ ಮೆಚ್ಚುಗೆ ವ್ಯಕ್ತಪಡಿಸಿದರು.

ಸಿಸಿಎಫ್ ಬಿ.ವಿ.ಪಾಟೀಲ, ಡಿಸಿಎಫ್‍ಗಳಾದ ಎಂ.ವಿ.ಅಮರನಾಥ ಮತ್ತು ಅಶೋಕ ಪಾಟೀಲ, ಎಸಿಎಫ್ ಎಂ.ಬಿ.ಕುಸನಾಳ, “ಝೂ” ಕ್ಯುರೇಟರ್ ರಾಕೇಶ ಅರ್ಜುನವಾಡ ಇತರರು ಉಪಸ್ಥಿತರಿದ್ದರು.

Tags:

error: Content is protected !!