Uncategorized

ಭೀಮಾತೀರದ ಕುಖ್ಯಾತ ಭಾಗಪ್ಪ ಹರಿಜನ ತಲವಾರ್ ನಿಂದ ಕುಂಬಳಕಾಯಿ ಹಾಗೂ ಬಾಳೆ ದಿಂಡು ಕತ್ತರಿಸಿದ ವಿಡಿಯೋ ವೈರಲ್

Share

 

ಪೂಜಾ ಕಾರ್ಯಕ್ರಮದಲ್ಲಿ ಭೀಮಾತೀರದ ಕುಖ್ಯಾತ ಭಾಗಪ್ಪ ಹರಿಜನ ತಲವಾರ್ ನಿಂದ ಕುಂಬಳಕಾಯಿ ಹಾಗೂ ಬಾಳೆ ದಿಂಡು ಕತ್ತರಿಸಿದ್ದು ವಿಡಿಯೋ ವೈರಲ್ ಆಗಿದೆ. ಭೀಮಾತೀರದ ಬಾಗಪ್ಪ‌ ಹರಿಜನ
ನೆರೆಯ ಮಹಾರಾಷ್ಟ್ರ ರಾಜ್ಯ ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ್ ತಾಲೂಕಿನ‌ ಎಲ್ಲಮ್ಮನ ಬಬಲಾದ ಗ್ರಾಮದ ಎಲ್ಲಮ್ಮ ದೇವಿ ದೇವಸ್ಥಾನದಲ್ಲಿ‌ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಗಪ್ಪನ ಮನೆ ದೇವರಾದ ಎಲ್ಲಮ್ಮ ಬಬಲಾದಿಯ ಎಲ್ಲಮ್ಮ ದೇವಸ್ಥಾನ
ಪೂಜಾ ಕಾರ್ಯಕ್ರಮ ಬಳಿಕ‌ ತಲವಾರ್ ನಿಂದ ಕುಂಬಳಕಾಯಿ ಹಾಗೂ ಬಾಳೆದಿಂಡನ್ನು ಕೊಚ್ಚಿದ್ದಾನೆ. ತಲೆ‌ ಮೇಲೆ ಮಕ್ಮಲ್ ಟೋಪಿ, ಬಿಳಿ‌ ಧೋತಿ, ಬಿಳಿ ಶಲ್ಯದಲ್ಲಿ ವಿಶೇಷ ವಸ್ತ್ರದಲ್ಲಿ ಕಂಡು ಬಂದ ಬಾಗಪ್ಪ ಈ‌ ಹಿಂದೆ ಇಂಡಿ‌‌ ಪಟ್ಟಣದ ಚಿನ್ಬದ ವ್ಯಾಪಾರಿ‌ ನಾಮದೇವ ಡಾಂಗೆಗೆ ಚಿನ್ನ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಜೈಲು‌ ಪಾಲಾಗಿದ್ದ ಸದ್ಯ‌ ಭಾಗಪ್ಪ ಜಾಮೀನು‌ ಪಡೆದು ಹೊರ ಬಂದಿದ್ದಾನೆ…

Tags:

error: Content is protected !!