Belagavi

ಬ್ಲಾಕ್‍ಮೇಲ್‍ಗೆ ಹೆದರುವ ಮನುಷ್ಯ ಯಡಿಯೂರಪ್ಪ ಅಲ್ಲ..ರಾಜಾಹುಲಿ ಪರ ಗೋಕಾಕ್ ಸಾಹುಕಾರ್ ಭರ್ಜರಿ ಬ್ಯಾಟಿಂಗ್

Share

ನಮ್ಮ ಯಡಿಯೂರಪ್ಪ ಬ್ಲಾಕ್‍ಮೇಲ್‍ಗೆ ಹೆದರುವ ಮನುಷ್ಯ ಅಲ್ಲ. ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದಿರುವ ಮನುಷ್ಯ. ಇಂತಹ ಸಿಡಿ, ಬ್ಲಾಕ್‍ಮೇಲ್‍ಗಳಿಗೆ ಯಡಿಯೂರಪ್ಪ ಹೆದರುವುದಿಲ್ಲ. ದೊಡ್ಡ ಪಕ್ಷದ ಆಶೀರ್ವಾದ ಇರುವಾಗ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಪರ ಸಚಿವ ರಮೇಶ ಜಾರಕಿಹೊಳಿ ಭರ್ಜರಿ ಬ್ಯಾಟಿಂಗ್ ಬೀಸಿದ್ದಾರೆ.

ಸಿಎಂ ಯಡಿಯೂರಪ್ಪ ವಿರುದ್ಧ ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ ರಾಜ್ಯದ ಮುಖ್ಯಮಂತ್ರಿಗಳು ತೆಗೆದುಕೊಂಡಿರುವ ನಿರ್ಣಯಕ್ಕೆ ನಾವು ಸಂಪೂರ್ಣವಾಗಿ ಬೆನ್ನೆಲುಬಾಗಿ ಇರುತ್ತೇವೆ. ನಮ್ಮದು ದೊಡ್ಡ ಪಕ್ಷ ಇರೋದ್ರಿಂದ ಅಸಮಾಧಾನ ಇರುವುದು ಸಹಜ. ಅದನ್ನು ಸರಿಪಡಿಸುವ ಶಕ್ತಿ ನಮ್ಮ ಪಕ್ಷಕ್ಕಿದೆ. ಈ ಬಗ್ಗೆ ಹೆಚ್ಚು ಒತ್ತು ಕೊಡುವ ಅವಶ್ಯಕತೆ ಇಲ್ಲ. ಇನ್ನು ಸಿಡಿ, ಬ್ಲಾಕ್‍ಮೇಲ್‍ಗಳಿಗೆ ಹೆದರುವ ಮನುಷ್ಯ ನಮ್ಮ ಯಡಿಯೂರಪ್ಪ ಅಲ್ಲ. ಜೀವನುದ್ದಕ್ಕೂ ಹೋರಾಟ ಮಾಡಿಕೊಂಡು ಬಂದಿರುವ ವ್ಯಕ್ತಿ ನಮ್ಮ ಯಡಿಯೂರಪ್ಪ ಎಂದು ಸಮರ್ಥಿಸಿಕೊಂಡರು.

ನನ್ನಲ್ಲಿ ಓರ್ವ ಸಚಿವರ ಭ್ರಷ್ಟಾರಾದ ದಾಖಲೆಗಳಿವೆ ಎಂದು ರೇಣುಕಾಚಾರ್ಯ ಆರೋಪದ ವಿಚಾರಕ್ಕೆ ಪ್ರತಿಕ್ರಯಿಸಿದ ರಮೇಶ ಜಾರಕಿಹೊಳಿ ಇಟ್ಟುಕೊಂಡು ಕುಳಿತುಕೊಳ್ಳುವುದಕ್ಕಿಂತ ದಾಖಲೆ ಬಹಿರಂಗ ಮಾಡುವುದು ಒಳ್ಳೆಯದು. ಯಡಿಯೂರಪ್ಪನವರು ಧಾರ್ಮಿಕತೆಯಲ್ಲಿ ನಂಬಿಕೆ ಇಟ್ಟ ದೈವಭಕ್ತ ಮನುಷ್ಯರಾಗಿದ್ದಾರೆ. ಮಾತು ಕೊಟ್ಟಂತೆ ನಡೆಯುವ ಮನುಷ್ಯ. ಹೀಗಾಗಿ ಎಲ್ಲ ಪ್ರಮಾಣದಲ್ಲಿ ಅವರ ಬೆನ್ನಿಗೆ ನಾವು ಇರುತ್ತೇವೆ ಎಂದು ತಿರುಗೇಟು ಕೊಟ್ಟರು.

ಇನ್ನು ಸರ್ಕಾರ ರಚನೆಯಲ್ಲಿ ಯೋಗೇಶ್ವರ ಪಾತ್ರದ ಕುರಿತು ಮಾತನಾಡಿದ ರಮೇಶ ಜಾರಕಿಹೊಳಿ ನಾನು ಎಷ್ಟು ಕಷ್ಟ ಪಟ್ಟಿದ್ದೇನೋ. ಅಷ್ಟೇ ಯೋಗೇಶ್ವರ ಕೂಡ ಕಷ್ಟ ಪಟ್ಟಿದ್ದಾರೆ. ಯೋಗೇಶ್ವರ್‍ಗೆ ಮಂತ್ರಿ ಸ್ಥಾನ ಸಿಕ್ಕಿದ್ದು ಯೋಗ್ಯವಿದೆ. 2023ರ ಚುನಾವಣೆಯಲ್ಲಿ ಗೆದ್ದು ಹಕ್ಕಿನಿಂದ ಸಚಿವರಾಗುವುದು ಒಳ್ಳೆಯದು. ಸಂದರ್ಭಕ್ಕೆ ಅನುಗುಣವಾಗಿ ಎಲ್ಲರೂ ತಿಳಿದುಕೊಳ್ಳಬೇಕು ಎಂದು ಅಸಮಧಾನಿತ ಶಾಸಜಕರಿಗೆ ರಮೇಶ ಜಾರಕಿಹೊಳಿ ತಿರುಗೇಟು ಕೊಟ್ಟರು.

ಒಟ್ಟಾರೆ ಸಿಎಂ ಯಡಿಯೂರಪ್ಪ ವಿರುದ್ಧ ಕೇಳಿ ಬಂದಿರುವ ಸಿಡಿ ಸೇರಿದಂತೆ ಯಾವುದೇ ಆರೋಪಕ್ಕೆ ಹೆದರೋದಿಲ್ಲ. ನಾವು ಸಂಪೂರ್ಣವಾಗಿ ಅವರ ಬೆನ್ನಿಗೆ ನಿಲ್ಲುತ್ತೇವೆ ಎಂದು ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

Tags:

error: Content is protected !!