Belagavi

ಬೆಳ್ಳಂಬೆಳಿಗ್ಗೆ ವನ್ಯಜೀವಿ ಹಂತಕನ ಮನೆ ಮೇಲೆ ಅರಣ್ಯಧಿಕಾರಿಗಳ ಅಟ್ಯಾಕ್..ಗನ್ ಸಹಿತ ಸಾಮಗ್ರಿ ವಶಕ್ಕೆ

Share

ಬೆಳಗಾವಿಯ ಹವ್ಯಾಸಿ ವನ್ಯಜೀವಿ ಹಂತಕ ಮೆಹಮೂದ್ ಅಲಿಖಾನ್(50) ಎಂಬಾತನ ನೆಹರು ನಗರದ ಮನೆ ಮೇಲೆ ಇಂದು ನಾಗರಗಾಳಿ ಮತ್ತು ಬೆಳಗಾವಿ ಉಪವಿಭಾಗದ ಅರಣ್ಯಾಧಿಕಾರಿಗಳ ತಂಡ ಬೆಳಂಬೆಳಿಗ್ಗೆ ದಾಳಿ ಮಾಡಿದೆ. ಆದ್ರೆ ಈ ವೇಳೆ ಅರಣ್ಯ ಅಧಿಕಾರಿಗಳಿಗೆ ಚಳ್ಳೆ ತಿನ್ನಿಸಿರುವ ಆರೋಪಿ ಮತ್ತೆ ಪರಾರಿಯಾಗಿದ್ದಾನೆ.

ಹೌದು ಡಿ.27ರಂದು ಕಿತ್ತೂರು ಅರಣ್ಯ ವಲಯದ ಕುಲವಳ್ಳಿ ಅರಣ್ಯದಲ್ಲಿ ಜಿಂಕೆ ಭೇಟಿಯಾಡುತ್ತಿದ್ದ ನಾಲ್ವರು ಹಂತಕರ ಪೈಕಿ ಇಬ್ಬರು ತಪ್ಪಿಸಿಕೊಂಡಿದ್ದರು. ತಪ್ಪಿಸಿಕೊಂಡ ಇಬ್ಬರ ಪೈಕಿ ಮೆಹಮೂದ್ ಮನೆ ಮೇಲೆ ಇಂದು ಬೆಳಿಗ್ಗೆ ನಾಗರಗಾಳಿ ಎಸಿಎಪ್ ಸಿ.ಜಿ. ಮಿರ್ಜಿ ನೇತೃತ್ವದಲ್ಲಿ ಬೃಹತ್ ದಾಳಿ ನಡೆದಿದ್ದು.

ನೆಹರು ನಗರದ ವನ್ಯಜೀವಿ ಹಂತಕ ಮೆಹಮೂದ್ ಅಲಿಖಾನ್ ಮನೆ ಮೇಲೆ ದಾಳಿ ಮಾಡಿದಾಗ ಚಿಗರೆ ಕೊಂಬು, ಪಾಯಿಂಟ್ 315 ರೈಫಲ್, ಒಂದು ದೂರದರ್ಶಕ, ಎರಡು ಚಾಕುಗಳು, 2 ಟಾರ್ಚ್, ವಾಹನಕ್ಕೆ ಅಳವಡಿಸುವ ಟಾರ್ಚ್, 2 ವಾಕಿ ಟಾಕಿ, ಜೀವಂತ ಬುಲೆಟಗಳು 26, ಡಿಬಿಎಲ್ ಸೇರಿದಂತೆ ವನ್ಯಬೇಟೆಗೆ ಬೇಕಾದ ಸಾಮಗ್ರಿಗಳು ಈತನ ಮನೆಯಲ್ಲಿ ಪತ್ತೆಯಾಗಿವೆ.

ಆದ್ರೆ ಈ ವೇಳೆ ಆರೋಪಿ ಓಡಿ ಹೋಗಿದ್ದಾನೆ. ಅಷ್ಟೊಂದು ಹಿರಿಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರೂ ಆರೋಪಿಯನ್ನು ಹಿಡಿಯಲು ಸಾಧ್ಯ ಆಗದೇ ಇರುವುದು ಸಧ್ಯ ತೀವ್ರ ಟೀಕೆಗೆ ಗುರಿಯಾಗಿದೆ. ಪರೀಕ್ಷಾರ್ಥಿ ಎಸಿಎಫ್ ಚಂದ್ರಶೇಖರ ಪಾಟೀಲ, ಗೋಲಿಹಳ್ಳಿ ಆರ್‍ಎಫ್‍ಓ ಶ್ರೀಕಾಂತ್ ಕಡೋಲಕರ, ಬೆಳಗಾವಿ ಆರ್‍ಎಫ್‍ಓ ಶಿವಾನಂದ ಮಗದುಮ, ಡಿಆರ್‍ಎಫ್‍ಓ ಸಂಜಯ ಮಗದುಮ, ಡಿಆರ್‍ಎಫ್‍ಓ ಮಾಧುರಿ ದಳವಾಯಿ, ವಿನಯ ಗೌಡರ, ಅಜೀಜ್ ಮುಲ್ಲಾ, ಗಿರೀಶ್ ಮೆಕ್ಕೇದ, ಪ್ರವೀಣ ದೂಳೆಪ್ಪಗೋಳ, ನವೀನ ಹಂಚಿನಮನಿ ಸೇರಿದಂತೆ ಇನ್ನಿತರರು ದಾಳಿಯಲ್ಲಿ ಭಾಗಿಯಾಗಿದ್ದರು. ಆರೋಪಿಗಾಗಿ ಪೆÇಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Tags:

error: Content is protected !!