ಬೆಳಗಾವಿ ಲೋಕಸಭೆ ಬೈಎಲೆಕ್ಷನ್ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಂಬಂಧ ಸೋಮವಾರ ಅಥವಾ ಮಂಗಳವಾರ ಮತ್ತೆ ಸಭೆ ಮಾಡುತ್ತೇವೆ. ಅಂತಿಮವಾಗಿ ಅಭ್ಯರ್ಥಿಯನ್ನು ಹೈಕಮಾಂಡ್ ಆಯ್ಕೆ ಮಾಡುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
: ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸತೀಶ ಜಾರಕಿಹೊಳಿ ಗ್ರಾಮ ಪಂಚಾಯತಿ ಚುನಾವಣೆ ಸಂಬಂಧ ಅಭ್ಯರ್ಥಿ ಆಯ್ಕೆ ಸಂಬಂಧ ಸಭೆ ನಡೆಸುವುದು ವಿಳಂಬವಾಗಿದೆ. ಬಹುಶಃ ಸೋಮವಾರ ಮಂಗಳವಾರ ಸಭೆ ಮಾಡುತ್ತೇವೆ. ಸಭೆ ಮಾಡಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.
ಬೆಳಗಾವಿ ಪಾಲಿಕೆ ಚುನಾವಣೆ ಪಕ್ಷದ ಪಕ್ಷದ ಆಧಾರದ ಮೇಲೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸತೀಶ ಜಾರಕಿಹೊಳಿ ಈ ಹಿಂದೆ ಯಾವಾಗಲೂ ಈ ರೀತಿ ಪಕ್ಷದ ಆಧಾರದಲ್ಲಿ ಚುನಾವಣೆ ನಡೆದಿಲ್ಲ. ಒಂದಿಷ್ಟು ಜನರು ಪಕ್ಷದ ಆಧಾರದ ಮೇಲೆ ಚುನಾವಣೆ ನಡೆಯಲಿ ಎಂದ್ರೆ ಮತ್ತೊಂದಿಷ್ಟು ಜನರು ಪಕ್ಷದ ಆಧಾರದ ಮೇಲೆ ಬೇಡ ಎನ್ನುತ್ತಿದ್ದಾರೆ. ಹೀಗಾಗಿ ಗೊಂದಲ ಆಗುತ್ತಿದೆ. ರಿಪೋರ್ಟ್ ಕೆಪಿಸಿಸಿ ಅಧ್ಯಕ್ಷರಿಗೆ ಕಳಿಸಲಾಗಿದೆ. ಅಂತಿಮವಾಗಿ ಅಧ್ಯಕ್ಷರು, ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಗೋಕಾಕ್‍ನಲ್ಲಿ ಲಖನ್ ಜಾರಕಿಹೊಳಿ ಪಕ್ಷ ಸಂಘಟನೆ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿದ ಸತೀಶ ಜಾರಕಿಹೊಳಿ ಆಸಕ್ತಿ ವಹಿಸಿಲ್ಲ ಆದ್ರೂ ಕೂಡ ಪಕ್ಷ ಇದೆ. ನಾವು ಕೆಲಸ ಮಾಡುತ್ತಿದ್ದೇವೆ. ಅವರೇ ಹೇಳಬೇಕು. ಅವರ ಆಸಕ್ತಿ ಬಗ್ಗೆ ನಾವು ಹೇಳೋಕೆ ಆಗುವುದಿಲ್ಲ. ಲಖನ್ ಜಾರಕಿಹೊಳಿ ರಾಜಕೀಯವಾಗಿ ಮುಂದುವರಿಯಬೇಕಾದ್ರೆ ಹೋರಾಟ ಮಾಡಬೇಕು, ಪಕ್ಷ ಸಂಘಟನೆ ಮಾಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ರೆ ಜನ ನಮ್ಮ ಪರ ನಿಲ್ಲುತ್ತಾರೆ ಎಂದು ಸಲಹೆ ನೀಡಿದರು.
: ಅಶೋಕ್ ಪೂಜಾರಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸತೀಶ ಜಾರಕಿಹೊಳಿ ಇನ್ನು ಚುನಾವಣೆ ದೂರ ಇದೆ. ಇನ್ನು ಎರಡೂವರೇ ವರ್ಷವಿದೆ. ಅದರ ಬಗ್ಗೆ ಚಿಂತನೆ ಮಾಡುವ ಅವಶ್ಯಕತೆಯಿಲ್ಲ. ಈಗ ತಕ್ಷಣ ಬರುವುದು ಲೋಕಸಭೆ ಚುನಾವಣೆ. ಹೀಗಾಗಿ ಅದರ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೇವೆ ಎಂದು ಹೇಳಿದರು. ಇನ್ನು ಗೋಕಾಕ್ ತಾಲೂಕಿನ ಪ್ರತಿ ಪಂಚಾಯತಿಗಳಲ್ಲಿ ನಮ್ಮ ಪಕ್ಷದ ಬೆಂಬಲಿತ ನಾಲ್ಕೈದು ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಇದೇ ವೇಳೆ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
: ಒಟ್ಟಾರೆ ಬೆಳಗಾವಿ ಬೈಎಲೆಕ್ಷನ್ ಟಿಕೆಟ್, ಪಾಲಿಕೆ ಚುನಾವಣೆ, ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸತೀಶ ಜಾರಕಿಹೊಳಿ ಈ ವೇಳೆ ಮಾತನಾಡಿದರು.