ಬೆಳಗಾವಿ ಕಪಿಲೇಶ್ವರ ರೈಲ್ವೆ ಗೇಟ್‍ನಿಂದ ಪಿ.ಬಿ.ರಸ್ತೆ ಬಳಿಯ ರೈಲ್ವೆ ಗೇಟ್ ನಡುವೆ ರೈಲ್ವೆ ಟ್ರ್ಯಾಕ್‍ನಲ್ಲೇ ಜನ ಮತ್ತು ವಾಹನ ಸಂಚಾರ ನಡೆಯುತ್ತಿದೆ. ಇದು ಅಪಾಯಕ್ಕೆ ಆಹ್ವಾನ ನೀಡುವಂತೆ ಇದ್ದರೂ ಸಂಬಂಧಿಸಿದವರು ಇತ್ತ ಲಕ್ಷ್ಯ ವಹಿಸಿಲ್ಲ ಎಂಬ ದೂರುಗಳು ಕೇಳುತ್ತಿವೆ.
ಹೌದು, ಇದು ಕಪಿಲೇಶ್ವರ ರೈಲ್ವೆ ಗೇಟ್‍ನಿಂದ ಪಿ.ಬಿ.ರಸ್ತೆ ಬಳಿಯ ರೈಲ್ವೆ ಗೇಟ್ ನಡುವೆ ರೈಲ್ವೆ ಟ್ರ್ಯಾಕ್. ಇಲ್ಲಿ ನೋಡಿದರೆ ರೈಲ್ವೆ ಟ್ರ್ಯಾಕ್‍ನಲ್ಲಿ ಜನರು ಓಡುತ್ತಿದ್ದಾರೆ. ಬೈಕ್ ಸವಾರರು ಡಬಲ್ ರೈಡ್ ಮಾಡುತ್ತಿದ್ದಾರೆ. ಇದು ಇಲ್ಲಿ ನಿತ್ಯವೂ ಕಾಣುವ ದೃಶ್ಯವಾಗಿದೆ.
ಅಪಾಯಕ್ಕೆ ಆಹ್ವಾನ ನೀಡುವಂತೆ ರೈಲ್ವೆ ಟ್ರ್ಯಾಕ್‍ನಲ್ಲಿ ಜನ ಮತ್ತು ವಾಹನ ಸಂಚಾರ ಇದ್ದರೂ ಕೇಳುವವರೇ ಇಲ್ಲ. ಕೆಲವರು ಹೇಳಿದರೆ ಜನರು ಮತ್ತು ವಾಹನ ಸವಾರರು ಕೇಳುವುದಿಲ್ಲ. ಇಲ್ಲದ ಉಸಾಬರಿ ನಿಮಗೇಕೆ ಎಂದು ವಾಪಸ್ ಪ್ರಶ್ನಿಸುತ್ತಿದ್ದಾರೆ. ಹಾಗಾಗಿ ಸಂಬಂಧಿಸಿದವರು ರೈಲ್ವೆ ಟ್ರ್ಯಾಕ್‍ನಲ್ಲಿ ಜನ ಮತ್ತು ವಾಹನ ಸಂಚಾರಕ್ಕೆ ನಿಷೇಧ ಹೇರಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.