Uncategorized

ಬೆಳಗಾವಿ ಬೀಫ್ ಮಾರ್ಕೆಟ್ ಸ್ಥಳಾಂತರಕ್ಕೆ ಆಗ್ರಹಿಸಿ ಸಚಿವರಿಗೆ ಡಾ.ಸೋನಾಲಿ ಸರ್ನೋಬತ್ ಮನವಿ

Share

ಬೆಳಗಾವಿ ಕ್ಯಾಂಟೋನ್ಮೆಂಟ್ ಪ್ರದೇಶ ಹಾಗೂ ನಗರದ ಹಸಿರು ವಲಯ ವ್ಯಾಪ್ತಿಯಲ್ಲಿರುವ ದನದ ಮಾಂಸ ಮಾರುಕಟ್ಟೆಯನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಇಂದು ಬೆಳಗಾವಿಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.

ಬೆಳಗಾವಿಯಲ್ಲಿ ಶುಕ್ರವಾರ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‍ಗೆ ಮನವಿ ಸಲ್ಲಿಸಿದ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆ ಡಾ.ಸೋನಾಲಿ ಸರ್ನೋಬತ್, ಬೆಳಗಾವಿ ಸ್ಮಾರ್ಟ್ ಸಿಟಿಯಾಗುವತ್ತ ದಾಪುಗಾಲು ಇರಿಸಿದೆ. ಆದರೆ ನಗರದ ಮಧ್ಯಭಾಗವೆನಿಸಿದ ಜನನಿಬೀಡ ಪ್ರದೇಶ ಹಾಗೂ ಹಸಿರು ವಲಯ ವ್ಯಾಪ್ತಿಯಲ್ಲಿ ದನದ ಮಾಂಸ ಮಾರುಕಟ್ಟೆ ಇದೆ. ಕೂಡಲೇ ಮಾಂಸ ಮಾರುಕಟ್ಟೆಯನ್ನು ಬೆಳಗಾವಿ ಹೊರವಲಯಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಬೆಳಗಾವಿಯಲ್ಲಿ ಬಿಡಾಡಿ ದನಗಳು, ನಾಯಿಗಳ ಸಂಖ್ಯೆ ಹೆಚ್ಚಿದ್ದು, ಸರ್ಕಾರ ಬೆಂಗಳೂರು, ಮೈಸೂರು ಮಾದರಿಯಲ್ಲಿ ನಗರದಲ್ಲಿ ಬಿಡಾಡಿ ಪ್ರಾಣಿಗಳಿಗಾಗಿ ಒಂದು ಆಶ್ರಯ ತಾಣ ನಿರ್ಮಿಸಬೇಕು. ಪ್ರಾಣಿಗಳ ಮೇಲಿನ ಹಿಂಸಾಚಾರ ತಡೆಗೆ ಎಸ್‍ಪಿಸಿಎ ಸಮಿತಿ ರಚಿಸುವಂತೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಬೇಕು. ಪ್ರಾಣಿಗಳಿಗಾಗಿ ಒಂದು ಆ್ಯಂಬುಲೆನ್ಸ್ ವಾಹನ ಸೇವೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಶಾಸಕ ಅನಿಲ ಬೆನಕೆ, ಅಭಯ ಪಾಟೀಲ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

Tags:

error: Content is protected !!