ಬೆಳಗಾವಿ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 10 ನೌಕರರಿಗೆ ಅಂಚೆ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗ ಹೃತ್ಪೂರ್ವಕವಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ಇವರು ಪಿ.ಎಸ್.ಕಲ್ಪತ್ರಿ, ಸುಮಾರು 32 ವರ್ಷದಿಂದ ಅಂಚೆ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಸೈಕಲ್ನಲ್ಲೇ ಕಚೇರಿಗೆ ಬರುತ್ತಿದ್ದ ಕಲ್ಪತ್ರಿ, ತಮ್ಮ ವೃತ್ತಿ ಬದುಕಿನಲ್ಲಿ ಸೈಕಲ್ನ್ನೇ ತಮ್ಮ ಸಂಚಾರದ ಸಂಗಾತಿಯನ್ನಾಗಿ ಮಾಡಿಕೊಂಡಿದ್ದರು. ಮಡಿಕೇರಿಯಿಂದ ಸೇವೆ ಆರಂಭಿಸಿದ ಕಲ್ಪತ್ರಿ, ಬೆಳಗಾವಿ ಮುಖ್ಯ ಅಂಚೆ ಕಚೇರಿಯಲ್ಲಿ ಅಸಿಸ್ಟಂಟ್ ಪೋಸ್ಟ್ ಮಾಸ್ಟರ್ ಆಗಿ ನಿವೃತ್ತರಾಗಿದ್ದಾರೆ.
ಅಸಿಸ್ಟಂಟ್ ಪೋಸ್ಟ್ ಮಾಸ್ಟರ್ ಕಲ್ಪತ್ರಿ ಅವರೂ ಸೇರಿದಂತೆ 10 ಜನ ನಿವೃತ್ತರಿಗೆ ಇಂದು ರಿಕ್ರಿಯೇಶನ್ ಕ್ಲಬ್ ವತಿಯಿಂದ ಹಾಗೂ ಇಲಾಖೆ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ವೇಳೆ ಅಸಿಸ್ಟಂಟ್ ಪೋಸ್ಟ್ ಸುಪರಿಟೆಂಡೆಂಟ್ ಎಂ.ಕೆ.ಕೊತ್ತಲ, ಉಮರಾಣಿ, ಸಿ.ಎಂ.ಕೆರಿಮಠ, ಜಿ.ಬಿ.ನಾಯ್ಕ ಸೇರಿ ಪೆನಶನರ್ ಅಸೋಸಿಯೇಶನ್ನ ಸಂಘಟನೆಯವರು ನಿವೃತ್ತ ಜೀವನಕ್ಕೆ ಶುಭ ಕೋರಿದರು.
ಈ ವೇಳೆ ಪಿ.ಎಸ್.ಕಲ್ಪತ್ರಿ ಮಾತನಾಡಿ, 32 ವರ್ಷದ ಸೇವಾವಧಿಯಲ್ಲಿ ಅಂಚೆ ಇಲಾಖೆಯಲ್ಲಿ ನೀಡಿದ ಸಹಕಾರ ಮರೆಯದಂಥದು. ಮುಂದೆ ಬರುವ ಅಧಿಕಾರಿಗಳು, ನೌಕರರಿಗೂ ಇದೇ ರೀತಿಯ ಸಹಕಾರ ಇರಬೇಕು ಎಂದರು.
ಕಾವೇರಿ ಪಾಟೀಲ, ಭಾರತಿ ನಾಝರೆ, ಅರುಣ ಕಾಳೆ, ಸಂಗಪ್ಪ ಕೋತಿನ್, ಮಲ್ಲಪ್ಪ ಮಾಳಗಿ, ಪ್ರಕಾಶ ಗುಂಜೀಕರ, ನಾಮದೇವ ಗಾಗಣೆ, ರಾಜೇಂದ್ರ ಸುತಾರ್, ಉತ್ತಮ ನಾಯಕ ಮತ್ತಿತರರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.