ಬೆಳಗಾವಿ ಖಾಸಬಾಗ್ದಲ್ಲಿರುವ ಬಯೋಮೆಡಿಕಲ್ ತ್ಯಾಜ್ಯ ಘಟಕವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದಿನವೂ ಬಯೋಮೆಡಿಕಲ್ ತ್ಯಾಜ್ಯವನ್ನು ಬಿಸಾಕುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರುಗಳು ಹೆಚ್ಚಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮಹಾನಗರ ಅಧಿಕಾರಿಗಳು, ಬಯೋಮೆಡಿಕಲ್ ತ್ಯಾಜ್ಯ ಘಟಕವನ್ನು ಸೀಜ್ ಮಾಡಲು ಸೂಚನೆ ನೀಡಿದರು.ಬೆಳಗಾವಿ ಖಾಸಬಾಗ್ದಲ್ಲಿರುವ ಬಯೋಮೆಡಿಕಲ್ ತ್ಯಾಜ್ಯ ಘಟಕದಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದಿನವೂ ಬಯೋಮೆಡಿಕಲ್ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಲಿನ್ಯ ತಾಂಡವವಾಡುತ್ತಿದ್ದು, ನಿವಾಸಿಗಳು ನಿರ್ಮಲ ಪರಿಸರದಲ್ಲಿ ವಾಸಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಮಹಾನಗರ ಪಾಲಿಕೆ ಹಾಗೂ ಪರಿಸರ ಇಲಾಖೆಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲಿಸಿ ಕೂಡಲೇ ತ್ವರಿತ ಕ್ರಮ ಕೈಗೊಳ್ಳಬೇಕು. ನಿಗದಿಗಿಂತ ಹೆಚ್ಚಿನ ಪ್ರಮಾಣದ ಬಯೋಮೆಡಿಕಲ್ ತ್ಯಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದು ಬೆಳಗಾವಿ ಭಾರತೀಯ ವೈದ್ಯಕೀಯ ಸಂಘಕ್ಕೆ ಪಾಲಿಕೆ ಮತ್ತು ಪರಿಸರ ಇಲಾಖೆ ನೋಟಿಸ್ ಜಾರಿ ಮಾಡಿ ಸೂಚನೆ ನೀಡಿತ್ತು. ಆದರೆ ಬೆಳಗಾವಿ ಐಎಂಎದಿಂದ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ಖಾಸಬಾಗ್ದಲ್ಲಿರುವ ಬಯೋಮೆಡಿಕಲ್ ತ್ಯಾಜ್ಯ ಘಟಕವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಸೀಜ್ ಮಾಡಿದರು.
ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್. ಅವರ ಆದೇಶದ ಮೇರೆಗೆ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ, ಪರಿಸರ ವಿಭಾಗದ ಎಂಜಿನೀಯರ್ ಆದಿಲ್ಖಾನ್, ಹೆಲ್ತ ಇನ್ಸಪೆಕ್ಟರ್ ಸಾಧಿಕ್ ಧಾರವಾಡಕರ, ಕಂದಾಯ ಇನ್ಸಪೆಕ್ಟರ್ ಪರಶುರಾಮ್ ಮೇತ್ರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸೀಸ್ಗೆ ಕ್ರಮ ಕೈಗೊಂಡರು.