ಮಹಾರಾಷ್ಟ್ರ ರಾಜ್ಯ ಪತ್ರಕರ್ತರ ಸಂಘದಿಂದ ಕೊಡ ಮಾಡುವ ರಾಜ್ಯಮಟ್ಟದ ಪ್ರಶಸ್ತಿಗೆ ಬೆಳಗಾವಿಯ ಮರಾಠಿ ಪತ್ರಕರ್ತ ಸಂಜಯ ಸೂರ್ಯವಂಶಿ ಆಯ್ಕೆಯಾಗಿದ್ದರು. ಬುಧವಾರ ಸಂಜಯ್ ಸೂರ್ಯವಂಶಿಗೆ ಮಹಾರಾಷ್ಟ್ರ ರಾಜ್ಯಪಾಲರು ತಮ್ಮ ಅಮೃತಹಸ್ತದಿಂದ ಪ್ರಶಸ್ತಿ ವಿತರಣೆ ಮಾಡಿದ್ದಾರೆ.
ಹೌದು ಬುಧವಾರ ಮಹಾರಾಷ್ಟ್ರದ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್‍ಸಿಂಗ್ ಕೋಶಾರಿ ಅವರು ಪತ್ರಕರ್ತ ಸಂಜಯ್ ಸೂರ್ಯವಂಶಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಯೋಗೇಶ್ ಜಾಧವ್, ವಿಜಯ್ ಬಾವಿಸ್ಕಾರ ಸೇರಿ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.