ಬೆಳಗಾವಿ ಮರಾಠಿ ದೈನಿಕ ಪುಢಾರಿ ಸುದ್ದಿ ಸಂಪಾದಕ ಸಂಜಯ ಸೂರ್ಯವಂಶಿ ಅವರಿಗೆ ಮಹಾರಾಷ್ಟ್ರ ಸರ್ಕಾರದ ವಿಶೇಷ ಪತ್ರಕರ್ತ ಪ್ರಶಸ್ತಿ ದೊರಕಿದೆ.
ಮುಂಬೈ ರಾಜಭವನದಲ್ಲಿ ಬುಧವಾರ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ಭಗತ್‍ಸಿಂಗ್ ಕೋಶಯಾರಿ ಪ್ರಶಸ್ತಿ ಪ್ರದಾನ ಮಾಡುವರು.
ಅಪರಾಧ ಸುದ್ದಿಗಳ ಮೂಲಕ ಮರಾಠಿ ಪತ್ರಿಕೋದ್ಯಮದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಸಂಜಯ ಸೂರ್ಯವಂಶಿ, ಹಂತ ಹಂತವಾಗಿ ಸುದ್ದಿ ಸಂಪಾದಕ ಹುದ್ದೆಗೆ ಬಡ್ತಿ ಪಡೆದುಕೊಂಡಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಸಾಧನೆಗಾಗಿ ಮಹಾರಾಷ್ಟ್ರ ಸರ್ಕಾರದ ವಿಶೇಷ ಪತ್ರಕರ್ತ ಪ್ರಶಸ್ತಿ ಪ್ರಕಟಿಸಲಾಗಿದೆ.
ಮುಂಬೈ ರಾಜಭವನದಲ್ಲಿ ಬುಧವಾರ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ಭಗತ್‍ಸಿಂಗ್ ಕೋಶಯಾರಿ ಪ್ರಶಸ್ತಿ ಪ್ರದಾನ ಮಾಡುವರು.