ಬೆಳಗಾವಿ ನಗರದ ಚವ್ಹಾಟಗಲ್ಲಿಯಲ್ಲಿ ಅಯ್ಯಪ್ಪಸ್ವಾಮಿ ಪೂಜೆಯನ್ನು ಭಕ್ತಿ ಭಾವದಿಂದ ಆಯೋಜನೆ ಮಾಡಲಾಗಿತ್ತು.
ಪ್ರತಿವರ್ಷ ಬೆಳಗಾವಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಯ್ಯಪ್ಪಸ್ವಾಮಿ ಪೂಜೆಯನ್ನು ಸಂಭ್ರಮ, ಸಡಗರದಿಂದ ನಡೆಸಲಾಗುತ್ತದೆ. ಆದರೆ ಕೊರೋನಾ ಸೋಂಕು ತಡೆ ಹಿನ್ನೆಲೆಯಲ್ಲಿ ಈ ಬಾರಿ ಅಯ್ಯಪ್ಪ ಸ್ವಾಮಿ ಪೂಜೆಯನ್ನು ಸಾಂಕೇತಿಕವಾಗಿ ನೆರವೇರಿಸಲಾಗುತ್ತಿದೆ.
ಶಬರಿಮಲೈ ಸಾಕಷ್ಟು ನಿರ್ಬಂಧಗಳು ಇರುವ ಕಾರಣದಿಂದ ಅಯ್ಯಪ್ಪಸ್ವಾಮಿ ಭಕ್ತರು ತಾವಿರುವ ಸ್ಥಳದಿಂದಲೇ ಅಯ್ಯಪ್ಪಸ್ವಾಮಿ ಪೂಜೆ ನೆರವೇರಿಸಿ ಸಂಕಲ್ಪ ಮಾಡಿದರು. ಬೆಳಗಾವಿ ಚವ್ಹಾಟಗಲ್ಲಿಯಲ್ಲೂ ರಾತ್ರಿ ಅಯ್ಯಪ್ಪಪೂಜೆ ನಡೆಸಿ ದೇವರ ನಾಮ ಸ್ಮರಣೆ, ಭಜನೆ ಮಾಡಿ ಸಂಭ್ರಮಿಸಿದರು. ಕೊರೋನಾ ರಾಜ್ಯ, ದೇಶ, ವಿಶ್ವವನ್ನು ಬಿಟ್ಟು ಬೇಗ ತೊಲಗಲಿ ಎಂದು ಪ್ರಾರ್ಥಿಸಿದರು.
ಅಯ್ಯಪ್ಪಸ್ವಾಮಿಯ ನೂರಾರು ಭಕ್ತರು ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.