ರಾಜ್ಯದ ಎರಡನೇಯ ರಾಜಧಾನಿ ಬೆಳಗಾವಿಯಲ್ಲಿನ ಶಿಕ್ಷಕರ ಸಮಸ್ಯೆ ಮತ್ತು ಬೇಡಿಕೆಗಳನ್ನ ಈಡೇರಿಸಿ, ಶಿಕ್ಷಣಮಟ್ಟವನ್ನ ಸುಧಾರಿಸುವ ಉದ್ಧೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಬಿಇಓ ಮತ್ತು ಶಿಕ್ಷಣಾಧಿಕಾರಿಗಳ ಸಭೆಯನ್ನ ಕರೆಯಲಾಗಿತ್ತು.
ಅತ್ಯುನ್ನತ ಸೇವೆ ನೀಡುವ ಉದ್ಧೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಬುಧವಾರದಂದು ಬೆಳಗಾವಿಯಲ್ಲಿ ಬಿಇಓ ಮತ್ತು ಶಿಕ್ಷಣಾಧಿಕಾರಿಗಳ ಸಭೆಯನ್ನ ಕರೆಯಲಾಗಿದೆ. ಶಿಕ್ಷಕರ ಬೇಡಿಕೆಗಳು, ಕೋವಿಡ್ ಸಂದರ್ಭದಲ್ಲಿ ಸಂತ್ರಸ್ಥರಾದ ಶಿಕ್ಷಕರ ಸಮಸ್ಯೆ, ಪರಿಹಾರ, ಎಚ್‌ಆರ್‌ಎಂಎಸ್, ಇನ್ನುಳಿದ ಸಮಸ್ಯೆಗಳನ್ನ ಪರಿಹರಿಸುವ ನಿಟ್ಟಿನಲ್ಲಿ ಈ ಸಭೆ ನಡೆಯಿತು.
ಎಂಎಲ್‌ಸಿ ಮತ್ತು ಉತ್ತರ-ಪಶ್ಚಿಮ ಶಿಕ್ಷಕರ ಸಂಘದ ಪ್ರತಿನಿಧಿ ಅರುಣ ಶಹಾಪುರ ಅವರು ಇಂದು ಬೆಳಗಾವಿಗೆ ಈ ಕುರಿತು ಮಾಹಿತಿ ನೀಡುತ್ತ, ರಾಜ್ಯದಲ್ಲೇ ಬೆಳಗಾವಿ ಅತಿದೊಡ್ಡ ಶೈಕ್ಷಣಿಕ ಜಿಲ್ಲೆಯಾಗಿದೆ. ಇಲ್ಲಿನ ಶಿಕ್ಷಕರ ಸಮಸ್ಯೆಯನ್ನ ಬಗೆಹರಿಸುವ ಸಲುವಾಗಿ ಮತ್ತು ರಾಷ್ಟಿಯ ಶಿಕ್ಷಣ ನೀತಿ ಜಾರಿಗೆ ಸಂಬAಧಿಸಿದAತೆ ಮಹತ್ವದ ಸಲಹೆ-ಸೂಚನೆಗಳ ಕುರಿತು ಚರ್ಚೆ ನಡೆಸಲಾಗಿದೆ. ತಂಡ ರಚಿಸಿ ಶಿಕ್ಷಣದ ಸಮಸ್ಯೆಯನ್ನ ನೀಗಿಸಲಾಗುತ್ತಿದೆ. ಇದರ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.
ಡಿಡಿಪಿಐ ಎಬಿ ಪುಂಡಲೀಕ ಸೇರಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ಧರು.