Belagavi

ಬೆಳಗಾವಿಯಲ್ಲಿ ಮುಗಿಬಿದ್ದು ಬಸ್ ಹಿಡಿಯುತ್ತಿರುವ ಮಕ್ಕಳು: ಕೋವಿಡ್‍ನಿಂದ ಎಲ್ಲಿ, ಯಾರಿಗಿದೆ ರಕ್ಷಣೆ?

Share

ರಾಜ್ಯದಲ್ಲಿ ಎಲ್ಲ ಶಾಲೆ, ಕಾಲೇಜುಗಳು ಪುನಾರಂಭಗೊಂಡಿವೆ. ಮಾಸ್ಕ್, ಸ್ಯಾನಿಟೈಸರ್, ಸೋಷಿಯಲ್ ಡಿಸ್ಟನ್ಸ್ ಎಂದು ನಿಯಮ ಪಾಲಿಸಲು ಸೂಚಿಸಲಾಗಿದೆ. ಆದರೆ ಮಕ್ಕಳು ಬಸ್ ಹಿಡಿಯಲು ಮುಗಿಬಿದ್ದು, ಶಾಲೆ, ಕಾಲೇಜುಗಳಿಗೆ ತೆರಳುತ್ತಿದ್ದಾರೆ ಮತ್ತು ವಾಪಸ್ ಮನೆಗೆ ಮರಳುತ್ತಿದ್ದಾರೆ. ಹಾಗಾಗಿ ಕೋವಿಡ್ ಸೋಂಕಿನಿಂದ ಎಲ್ಲಿದೆ ಮಕ್ಕಳಿಗೆ ರಕ್ಷಣೆ? ಎಂದು ಪಾಲಕರು, ಪೋಷಕರು ಪ್ರಶ್ನಿಸುತ್ತಿದ್ದಾರೆ.

ರಾಜ್ಯದಲ್ಲಿ ಶಾಲೆ ಕಾಲೇಜು ಪುನಾರಂಭಗೊಂಡ ನಂತರ ಸೋಮವಾರ ಬೆಳಗಾವಿ ಸಿಟಿ ಮತ್ತು ಗ್ರಾಮಾಂತರ ಬಸ್‍ಗಳು ಪ್ರಯಾಣಿಕರಿಂದ ಕಿಕ್ಕಿರಿದಿವೆ. ಸಿಕ್ಕ ಬಸ್ ಹಿಡಿದು ಸೀಟು ಸಿಗದೇ ಬಸ್‍ನಲ್ಲಿ ಜೋತು ಬಿದ್ದು ಶಾಲೆ, ಕಾಲೇಜುಗಳಿಗೆ ತೆರಳಿದ್ದ ವಿದ್ಯಾರ್ಥಿಗಳು ಶಾಲೆ, ಕಾಲೇಜು ಬಿಟ್ಟ ನಂತರ ಬಸ್‍ಗೆ ಕಾಯುತ್ತ ರಸ್ತೆ ಪಕ್ಕ ನಿಂತಿದ್ದರು. ಒಬ್ಬರ ಮೇಲೊಬ್ಬರು ಬಿದ್ದು ಬಸ್ ಏರಿದರು, ಇಳಿದರು.
ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಲ್ಲಿ ಮಾಸ್ಕ್, ಸ್ಯಾನಿಟೈಸರ್, ಸೋಷಿಯಲ್ ಡಿಸ್ಟನ್ಸ್ ಎಂದು ನಿಯಮ ಪಾಲಿಸಲು ಸೂಚಿಸಲಾಗಿದೆ. ಆದರೆ ಶಾಲೆ, ಕಾಲೇಜುಗಳಲ್ಲಿ ನಿಯಮ ಅನುಸರಿಸುವ ಮಕ್ಕಳು, ಬಸ್‍ನಲ್ಲಿ ಬರುವ ಹೋಗುವ ವೇಳೆ ನಿಯಮ ಪಾಲಿಸಲು ಆಗುತ್ತಿಲ್ಲ. ಇದಕ್ಕಾಗಿ ಕೋವಿಡ್ ಸೋಂಕಿನಿಂದ ಎಲ್ಲಿದೆ ಮಕ್ಕಳಿಗೆ ರಕ್ಷಣೆ ಎಂದು ಪಾಲಕ, ಪೋಷಕರು ಪ್ರಶ್ನಿಸುತ್ತಿದ್ದಾರೆ. ಉಳ್ಳವರ ಮಕ್ಕಳಾದರೆ ಸರಿ, ಖಾಸಗಿ ವಾಹನಗಳಲ್ಲಿ ಶಾಲೆ ತೆರಳಿ, ಮರಳಬಹುದು. ಆದರೆ ಜನಸಾಮಾನ್ಯರ ಮಕ್ಕಳು ಭರ್ತಿ ಬಸ್‍ಗಳಲ್ಲಿಯೇ ಪ್ರಯಾಣಿಸಬೇಕಲ್ಲ, ಅವರಿಗೆ ರಕ್ಷಣೆ ನೀಡುವವರಾರು ಎಂಬುದು ಪಾಲಕ, ಪೋಷಕರ ಪ್ರಶ್ನೆ.

 

Tags:

error: Content is protected !!