ಅಸ್ಪøಶ್ಯತೆ ವಿರುದ್ಧ ಸಿಡಿದೆದ್ದು ಪೇಶ್ವೆಗಳೊಂದಿಗೆ ಪುಣೆ ಬಳಿಯ ಭೀಮಾ ಕೊರೇಗಾಂವ್‍ದಲ್ಲಿ ಯುದ್ಧ ಮಾಡಿ ಗೆದ್ದ ಮಹಾರ್ ಜನಾಂಗದ ಹೋರಾಟದ ನೆನಪಿಗಾಗಿ ವಿವಿಧ ಬೆಳಗಾವಿಯಲ್ಲಿ ದಲಿತ ಸಂಘಟನೆಗಳ ವತಿಯಿಮದ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನವನ್ನು ಹಮ್ಮಿಕೊಳ್ಳಲಾಗಿತ್ತು.
: ಬೆಳಗಾವಿ ಅಂಬೇಡ್ಕರ್ ಗಾರ್ಡ್‍ನ್‍ನಲ್ಲಿ ಶುಕ್ರವಾರ ಭೀಮಾ ಕೊರೇಗಾಂವ್ ವಿಜಯೋತ್ಸವ ದಿನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಮಹಾರ್ ರೆಜಿಮೆಂಟ್ ಸ್ಥಾಪನೆಯಾದ ಕೋಟೆ ಪ್ರದೇಶದಿಂದ ಅಂಬೇಡ್ಕರ್ ಗಾರ್ಡನ್‍ವರೆಗೆ ಜ್ಯೋತಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.
ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಅಂಬೇಡ್ಕರ್ ಗಾರ್ಡನ್‍ನಲ್ಲಿ ನಡೆದ ಕಾರ್ಯಕ್ರಮವನ್ನು ದಲಿತ ಮುಖಂಡರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ಈ ವೇಳೆ ಪ್ರೊ. ಕೆ.ಡಿ.ಮಂತ್ರೇಶಿ ಮಾತನಾಡಿ, ಭೀಮಾ ಕೋರೆಗಾಂವ್ ಪ್ರಕರಣ ದಲಿತರ ವಿಜಯೋತ್ಸವದ ಸಂಕೇತವಾಗಿದೆ. ನಮಗೆ ಇತಿಹಾಸದ ಬಗ್ಗೆ ಅಜ್ಞಾನ ಇದೆ. ರಾಯಣ್ಣನ ಇತಿಹಾಸವೂ ನಮಗೆ ಗೊತ್ತಿಲ್ಲ. ಶಿವಾಜಿ ಮಹಾರಾಜರ ಇತಿಹಾಸವೂ ತಿಳಿದಿಲ್ಲ. ಅಂಬೇಡ್ಕರ್ ಇತಿಹಾಸವನ್ನು, ಹೋರಾಟದ ಮಜಲುಗಳನ್ನು ನಾವಿನ್ನೂ ತಿಳಿದುಕೊಳ್ಳಬೇಕಾಗಿದೆ. ನಾಡಿನ ಎಲ್ಲ ವರ್ಗದ ಜನರಿಗೆ ಮೆಚ್ಚುಗೆಯಾಗುವಂತೆ ಆಡಳಿತ ನಡೆಸಿದವರು ಯಾರು ಎಂಬ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಆಗಬೇಕಿದೆ ಎಂದರು.
ಇನ್ನು ದಲಿತ ಮುಖಂಡ ಮಲ್ಲೇಶ ಚೌಗಲೆ ಭೀಮಾ ಕೋರೆಗಾಂವ್ ವಿಜಯೋತ್ಸವದ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಪೇಶ್ವೆಗಳ ವಿರುದ್ಧ ಕೇವಲ 500 ಮಹಾರ್ ಯೋಧರು ಹೋರಾಡಿ ಜಯ ಗಳಿಸಿದ ನೆನಪಿನಲ್ಲಿ ಪ್ರತಿವರ್ಷ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತದೆ. ಇದು ಅಸ್ಪøಶ್ಯತೆಯ ವಿರುದ್ಧ ನಡೆದ ಮೊದಲ ದೊಡ್ಡ ಹೋರಾಟವಾಗಿದೆ. 1818 ಜನವರಿ 1ರಂದು ಯುದ್ಧ ನಡೆದು ವಿಜಯ ಪ್ರಾಪ್ತಿಯಾದ ಸ್ಮರಣೆಯಾಗಿ ಪ್ರತಿವರ್ಷವೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಡಾ.ಬಾಬಾಸಾಹೇಬ ಅಂಬೇಡ್ಕರ್ ಸಹ ಭೀಮಾ ಕೋರೆಗಾಂವ್‍ಗೆ ಭೇಟಿ ನೀಡಿದ್ದರು. ಪ್ರತಿವರ್ಷ ಅಲ್ಲಿ 30 ಲಕ್ಷ ಜನ ಸೇರುತ್ತಾರೆ. ಇದು 203ನೇ ವರ್ಷದ ವಿಜಯೋತ್ಸವವಾಗಿದೆ. ಬೆಳಗಾವಿಯಲ್ಲಿ ಜ್ಯೋತಿ ಯಾತ್ರೆ, ಸಂಸ್ಮರಣೆ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಈ ವೇಳೆ ದಲಿತ ಮುಖಂಡರಾದ ಬಸವರಾಜ ರಾಯಗೋಳ, ಅಶೋಕ ಮನ್ನಿಕೇರಿ, ಮಲ್ಲೇಶ ಚೌಗಲೆ, ಸಿದ್ರಾಯಿ ಮೇಸ್ತ್ರಿ, ಸುಧೀರ ಚೌಗಲೆ ಮತ್ತಿತರರು ಇದ್ದರು.