Belagavi

ಬೆಳಗಾವಿಯಲ್ಲಿ ಬಸವ ಭೀಮ ಸೇನೆಯಿಂದ ಅಕ್ಷರ ಲೋಕದ ಕಿಡಿಗಳಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ

Share

ಬೆಳಗಾವಿಯ ಬಸವ ಭೀಮ ಸೇನೆ ವತಿಯಿಂದ ದೇಶದ ಮೊಟ್ಟ ಮೊದಲ ಶಿಕ್ಷಕಿ, ಮಹಿಳಾ ಅಕ್ಷರ ಕ್ರಾಂತಿಯ ರೂವಾರಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನ ಹಾಗೂ ಅಕ್ಷರ ತಾಯಿ ಸೇರಿದಂತೆ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭವು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಿತು.

ಬೆಳಗಾವಿಯ ಬಸವ ಭೀಮ ಸೇನೆ ವತಿಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದೇಶದ ಮೊಟ್ಟ ಮೊದಲ ಶಿಕ್ಷಕಿ, ಮಹಿಳಾ ಅಕ್ಷರ ಕ್ರಾಂತಿಯ ರೂವಾರಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನ ಹಾಗೂ ಅಕ್ಷರ ತಾಯಿ ಸೇರಿದಂತೆ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದ ಸಾನ್ನಿಧ್ಯವನ್ನು ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ ವಹಿಸಿದ್ದರು. ಪತ್ರಕರ್ತ ದಿಲೀಪ ಕುರಂದವಾಡೆ ಕಾರ್ಯಕ್ರಮ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಶಿಕ್ಷಕಿಯರಾದ ಎಂ.ಸುಧಾ, ಜಯಶ್ರೀ ಕಡಕೋಳ, ಸುಮಾ ದೊಡಮನಿ, ವಂದನಾ ಗಾವಡೆ, ಗೀತಾ ಜಮಖಂಡಿ, ಸುರೇಖಾ ಮಿರ್ಜೆ, ಸುವರ್ಣಾ ದಶವಂತ, ಕಿರಣ ಗಾಯಕವಾಡ, ಲೀಲಾವತಿ ದೊಡಮನಿ, ಶಿವಬಾಯವ್ವ ಮಠದ, ಪ್ರೇಮಾ ಜಡಗಿ, ಅನ್ನಪೂರ್ಣ ವಜ್ರಮಟ್ಟಿ, ನೂತನ ಕಾಗಲ, ಎಂ.ಐ. ಬೇಪಾರಿ ಮತ್ತು ಎಸ್.ಕೆ.ಕವಿಶೆಟ್ಟಿ ಅವರುಗಳಿಗೆ ಅಕ್ಷರ ತಾಯಿ ಸಾವಿತ್ರಿಬಾಯಿ ಫುಲೆ ಅಂತಾರಾಜ್ಯ ಪ್ರಶಸಿ ಪ್ರದಾನ ಮಾಡಲಾಯಿತು.

ಡಾ.ಅನ್ನಪೂರ್ಣ ಕಾರಿ ಮತ್ತು ಲೀಲಾ ಪಾಟೀಲ ಅವರಿಗೆ ನಾರಿಕುಲ ಚೇತನ ಸಾವಿತ್ರಿಬಾ¬ಫುಲೆ ಅಂತಾರಾಜ್ಯ ಪ್ರಶಸ್ತಿ, ಗೀತಾ ಬಸವರಾಜ ಕೋಲ್ಕಾರ ದಂಪತಿಗೆ ಸಾವಿತ್ರಿಬಾಯಿ ಜ್ಯೋತಿಬಾ ಫುಲೆ, ಆದರ್ಶ ದಂಪತಿ ಅಂತಾರಾಜ್ಯ ಪ್ರಶಸ್ತಿ, ಡಾ. ಮಲ್ಲಪ್ಪ ಬಾಗೇವಾಡಿ ಅವರಿಗೆ ಜ್ಯೋತಿಭಾ ಫುಲೆ ಜೀವಮಾನದ ಸಾಧನಾ ಅಂತಾರಾಜ್ಯ ಪ್ರಶಸ್ತಿ, ಮಹಾದೇವ ತೋಟಗಿ, ಧರೆಪ್ಪ ಠಕ್ಕಣ್ಣವರ ಮತ್ತು ರಮೇಶ ಕೊಪ್ಪದ ಅವರಿಗೆ ಜ್ಯೋತಿಭಾ ಫುಲೆ ಸಮಾಜ ಸೇವಾ ಅಂತಾರಾಜ್ಯ ಪ್ರಶಸಿ ಪ್ರದಾನ ನಡೆಯಿತು.

ಈ ವೇಳೆ ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಮಾತನಾಡಿ, ಸಾಮಾಜಿಕ ಸಮಾನತೆಗಾಗಿ ಬಸವಣ್ಣ ಬಿತ್ತಿದ ಬೀಜ ಇಂದು ಫಲ ನೀಡುತ್ತಿದೆ. ಸಮಾಜವನ್ನು ಜಾಗೃತಗೊಳಿಸಲು ಬಸವಣ್ಣ ಇರಿಸಿದ ದಿಟ್ಟ ಹೆಜ್ಜೆ ಒಂದು ಕ್ರಾಂತಿಕಾರಕ ಹೆಜ್ಜೆಯಾಗಿತ್ತು. ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿ ಕೇವಲ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣದ ಕಡೆಗೆ ಸೆಳೆದವರು ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿ ಬಾ ಫುಲೆ ದಂಪತಿ. ಸಾವಿತ್ರಿಬಾಯಿ ಅವರ ಪ್ರಯತ್ನದಿಂದ ಮಹಿಳೆಯರು ಶಿಕ್ಷಣ ಪಡೆಯುವಂತಾಯಿತು. ಫುಲೆ ಅವರ ಕ್ರಾಂತಿಕಾರಿ ಹೆಜ್ಜೆ ಇಂದು ಫಲ ನೀಡಿದೆ. ಮಹಿಳೆಯರಿಗೆ ಸಮಾಜದಲ್ಲಿ ಉನ್ನತ ಸ್ಥಾನ ಮಾನಗಳು, ಸಾಕಷ್ಟು ಅವಕಾಶಗಳು ತೆರೆದುಕೊಂಡಿವೆ. ಅಕ್ಷರದವ್ವನ ಈ ಕಾರ್ಯ ಸ್ಮರಿಸುವಂಥದು ಎಂದರು.

ಸಮಾರಂಭದಲ್ಲಿ ಪೊಲೀಸ್ ಉಪ ನಿರೀಕ್ಷಕಿ ಸಿಐಡಿ ಅರಣ್ಯ ಸಂಚಾರಿ ದಳದ ರೋಹಿಣಿ ಪಾಟೀಲ, ಕುಂದಗೋಳದ ಸಮಾಜ ಸೇವಕ ರಮೇಶ ಕೊಪ್ಪದ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕøತ ಶಿಕ್ಷಕಿ ಸುಶೀಲಾ ಗುರವ ಮುಖ್ಯ ಅತಿಥಿಗಳಾಗಿದ್ದರು. ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕøತ ಶಿಕ್ಷಕಿ ಪ್ರಭಾವತಿ ಹಾಲಣ್ಣವರ ಅಧ್ಯಕ್ಷತೆ ವಹಿಸಿದ್ದರು.
ಸಾವಿತ್ರಿಬಾಯಿ ಫುಲೆ ಅಭಿಮಾನಿಗಳು, ಬಸವ ಭೀಮ ಸೇನೆಯ ಕಾರ್ಯಕರ್ತರು, ಗಣ್ಯರು, ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Tags:

error: Content is protected !!