ಬೆಳಗಾವಿ ಮಹಾನಗರ ಪಾಲಿಕೆ ಎದುರು ವಿವಿಧ ಕನ್ನಡಪರ ಸಂಘಟನೆಗಳಿಂದ ಹಾರಿಸಿದ ಕನ್ನಡ ಧ್ವಜವನ್ನ ತೆರವುಗೊಳಿಸುವಂತೆ ಒತ್ತಾಯಿಸಿ, ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಮಹಾರಾಷ್ಟ್ರದಿಂದ ಸಾವಿರಾರು ಶಿವಸೈನಿಕರು ಆಗಮಿಸಲಿದ್ದಾರಂತೆ.
ಹೌದು, ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಕನ್ನಡಪರ ಸಂಘಟನೆಗಳಿಂದ ಕನ್ನಡ ಧ್ವಜವನ್ನ ಹಾರಿಸಲಾಗಿದೆ. ಆದರೇ ಮಹಾರಾಷ್ಟ್ರ ಏಕೀಕರಣ ಸಮಿತಿ ಈ ಧ್ವಜವನ್ನ ತೆರವುಗೊಳಿಸುವಂತೆ ಒತ್ತಾಯಿಸುತ್ತಿದೆ. ಅಲ್ಲದೇ ಬೆಳಗಾವಿ ಜಿಲ್ಲಾಡಳಿತಕ್ಕೆ ಈ ತಿಂಗಳ 20ರೊಳಗಾಗಿ ಕನ್ನಡ ಧ್ವಜವನ್ನ ತೆರವುಗೊಳಿಸುವಂತೆ ಗಡುವು ನೀಡಿದೆ. ಆದರೇ ಜಿಲ್ಲಾಡಳಿತ ಧ್ವಜವನ್ನ ತೆರವುಗೊಳಿಸಿಲ್ಲ. ಆದ್ದರಿಂದ ಎಂಇಎಸ್ ನಾಳೆ ಜನವರಿ 21 ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಇದಕ್ಕೆ ಶಿವಸೇನೆ ಪಕ್ಷವೂ ಕೂಡ ತನ್ನ ಬೆಂಬಲವನ್ನ ಸೂಚಿಸಿದ್ದು, ಮಹಾರಾಷ್ಟ್ರದಿಂದ ಸಾವಿರಾರು ಶಿವಸೈನಿಕರು ಇದರಲ್ಲಿ ಭಾಗಿಯಾಗಲಿದ್ದಾರೆ.
ಈ ಕುರಿತು ಕೊಲ್ಹಾಪುರದ ಶಿವಸೇನೆಯ ಅಧ್ಯಕ್ಷ ವಿಜಯ ದೇವಣೆ ಇನ್ ನ್ಯೂಸ್‍ಗೆ ಮಾಹಿತಿ ನೀಡಿದ್ದು, ಎಂಇಎಸ್‍ನಿಂದ ಕರೆ ನೀಡಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಲೂ ಮಹಾರಾಷ್ಟ್ರದ ವಿವಿಧೆಡೆಯಿಂದ ಶಿವಸೈನಿಕರು ಸಹಸ್ರಾರು ಸಂಖ್ಯೆಯಲ್ಲಿ ಭಾಗಿಯಾಗಲಿದ್ದಾರೆಂದು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತುಗೊಂಡು ಧ್ವಜವನ್ನ ತೆರವುಗೊಳಿಸಬೇಕೆಂದು ಎಚ್ಚರಿಸಿದ್ದಾರೆ.